ನವದೆಹಲಿ(ಜು.03): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿರುವ ಹಿನ್ನೆಲೆಯಲ್ಲಿ, ಗುಜರಾತ್’ನ ವ್ಯಕ್ತಿಯೋರ್ವ ರಾಷ್ಟ್ರ ರಾಜಧಾನಿ ನವದೆಹಲಿಯವರೆಗೂ ಸೈಕ್ಲಿಂಗ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಆತನ ಸಾಧನೆಯನ್ನು ಕೊಂಡಾಡಿದ್ದಾರೆ.

ಗುಜರಾತ್’ನ ಅಮ್ರೇಲಿಯ ಕಿಮಚಂದ್’ಭಾಯಿ ಎಂಬಾತ ಸುಮಾರು 1,100 ಕಿ.ಮೀವರೆಗೆ ಸೈಕ್ಲಿಂಗ್ ಮಾಡಿ ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದ್ದಾನೆ. ಕಿಮಚಂದ್’ಭಾಯಿ ಅವರನ್ನು ಭೇಟಿ ಮಾಡಿರುವ ಪ್ರಧಾನಿ ಮೋದಿ, ಕಿಮಚಂದ್’ಭಾಯಿ ಅವರ ಧೈರ್ಯ ಮತ್ತು ಸಾಹಸ ತಮ್ಮನ್ನು ತುಂಬ ಪ್ರಭಾವಿತಗೊಳಿಸಿದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವಿಟ್ಟರ್’ನಲ್ಲಿ ಫೋಟೋ ಶೇರ್ ಮಾಡಿರುವ ಪ್ರಧಾನಿ ಮೋದಿ, ಕೇವಲ 17 ದಿನಗಳಲ್ಲಿ ಅಮ್ರೇಲಿಯಿಂದ ದೆಹಲಿ ತಲುಪಿರುವ ಕಿಮಚಂದ್’ಭಾಯಿ ನಮಗೆಲ್ಲಾ ಸ್ಪೂರ್ತಿ ಎಂದು ಹೇಳಿದ್ದಾರೆ. 

ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಭಾವಚಿತ್ರವುಳ್ಳ ಸೈಕಲ್ ಮೇಲೆ ಕಿಮಚಂದ್’ಭಾಯಿ ಗುಜರಾತ್’ನ ಅಮ್ರೇಲಿಯಿಂದ ರಾಷ್ಟ್ರ ರಾಜಧಾನಿ ನವದೆಹಲಿಯವರೆಗೆ ಬರೋಬ್ಬರಿ 1,110 ಕಿ.ಮೀ ಸೈಕ್ಲಿಂಗ್ ಮಾಡಿದ್ದಾರೆ.