ಬಿಹಾರದ ನೆರೆಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಇಂದು ರೂ.500 ಕೋಟಿ ತುರ್ತು ಪರಿಹಾರವನ್ನು ಘೋಷಿಸಿದ್ದಾರೆ. ಈ ಪರಿಹಾರ ಮೊತ್ತದ ಹೊರತಾಗಿ, ನೆರೆ ಸಂತ್ರಸ್ತ ಕುಟುಂಬಗಳಿಗೆ ತಲಾ ರೂ. 2 ಲಕ್ಷ ನೆರವನ್ನು ಕೂಡಾ ಘೋಷಿಸಿದ್ದಾರೆ ಎ ಂದು ಪ್ರಧಾನಿ ಕಚೇರಿಯು ತಿಳಿಸಿದೆ.
ನವದೆಹಲಿ: ಬಿಹಾರದ ನೆರೆಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಇಂದು ರೂ.500 ಕೋಟಿ ತುರ್ತು ಪರಿಹಾರವನ್ನು ಘೋಷಿಸಿದ್ದಾರೆ.
ಈ ಪರಿಹಾರ ಮೊತ್ತದ ಹೊರತಾಗಿ, ನೆರೆ ಸಂತ್ರಸ್ತ ಕುಟುಂಬಗಳಿಗೆ ತಲಾ ರೂ. 2 ಲಕ್ಷ ನೆರವನ್ನು ಕೂಡಾ ಘೋಷಿಸಿದ್ದಾರೆ ಎ ಂದು ಪ್ರಧಾನಿ ಕಚೇರಿಯು ತಿಳಿಸಿದೆ.
ನೆರೆಯಿಂದ ಸಂಭವಿಸಿರುವ ಹಾನಿಯ ವಿವರವಾದ ಸಮೀಕ್ಷೆ ನಡೆಸಲು ತಂಡವನ್ನು ಶೀಘ್ರದಲ್ಲೇ ಕಳುಹಿಸಲಾಗುವುದೆಂದು ಹೇಳಲಾಗಿದೆ.
ಬೆಳೆ ಹಾನಿಯಿಂದ ರೈತರಿಗಾಗಿರುವ ನಷ್ಟವನ್ನು ಆದಷ್ಟು ಬೇಗ ಭರಿಸುವಂತಾಗಲು ವಿಮಾ ಕಂಪನಿಗಳು ತಮ್ಮ ಸಿಬ್ಬಂದಿಯನ್ನು ತಕ್ಷಣ ಕಳುಹಿಸಬೇಕು ಎಂದು ಪ್ರಧಾನಿ ಸೂಚಿಸಿದ್ದಾರೆ.
ಬಿಹಾರಕ್ಕೆ ಗರಿಷ್ಠ ನೆರವನ್ನೊದಗಿಸುವುದಾಗಿವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.
ಸುರಿಯುತ್ತಿರುವ ಸತತ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಬಿಹಾರದ ಸುಮಾರು 19 ಜಿಲ್ಲೆಗಳು ನೆರೆಯಿಂದ ಪೀಡಿತವಾಗಿವೆ.
