ನವದೆಹಲಿ(ಜು.19): ಸ್ವಾತಂತ್ರ್ಯ ದಿನಾಚರಣೆಗಾಗಿ ತಾವು ಮಾಡಲಿರುವ ಭಾಷಣಕ್ಕಾಗಿ ಸಲಹೆ ಕೇಳಿ, ಪ್ರಧಾನಿ ಮೋದಿ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ. ತಮ್ಮ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಜನರಿಂದ  ಸಲಹೆಗಳನ್ನು ಆಹ್ವಾನಿಸುವುದಾಗಿ ಮೋದಿ ತಿಳಿಸಿದ್ದಾರೆ.

ಆಗಸ್ಟ್ 15ರಂದು ಕೆಂಪು ಕೋಟೆಯಲ್ಲಿ ದೇಶವನ್ನು ಉದ್ದೇಶಿಸಿ ತಾವು ಮಾಡುವ ಭಾಷಣಕ್ಕೆ ಜನರಿಂದ ಸಲಹೆಗಳನ್ನು ಬಯಸಿರುವುದಾಗಿ ಮೋದಿ ಹೇಳಿದ್ದಾರೆ. ಜನ ಸಾಮಾನ್ಯರ ವಿಚಾರಗಳನ್ನು ಈಡೀ ದೇಶಕ್ಕೆ ತಿಳಿಸಲು ಅವಕಾಶ ಕಲ್ಪಿಸಲಿರುವುದಾಗಿ ಪ್ರಧಾನಿ ನುಡಿದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಜನರಿಂದ ಸಲಹೆಗಳನ್ನು ಸ್ವೀಕರಿಸಲು ನಮೋ ಆ್ಯಪ್ ‘ಓಪನ್ ಫೋರಮ್’ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.