ನಾಳೆ(ಜೂ.17)ಯಿಂದ 17 ನೇ ಲೋಕಸಭೆಯ ಮೊದಲ ಅಧಿವೇಶನ| ಜೂ.16ರಿಂದ ಜುಲೈ .26ರವರೆಗೆ ಸಂಸತ್ ಕಲಾಪ್| ಪ್ರಧಾನಿ ಮೋದಿ ನೇತೃತತ್ವದಲ್ಲಿ ಇಂದು ಸರ್ವಪಕ್ಷ ಸಭೆ| ಸುಗಮ ಅಧಿವೇಶನಕ್ಕಾಗಿ ಪ್ರತಿಪಕ್ಷಗಳ ಸಹಕಾರ ಕೋರಿದ ಪ್ರಧಾನಿ| 

ನವದೆಹಲಿ(ಜೂ.16): ನಾಳೆ(ಜೂ.17)ಯಿಂದ ಆರಂಭವಾಗಲಿರುವ 17 ನೇ ಲೋಕಸಭೆಯ ಮೊದಲ ಅಧಿವೇಶನದ ಹಿನ್ನೆಲೆಯಲ್ಲಿ, ಇಂದು ನವದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತತ್ವದಲ್ಲಿ ಇಂದು ಸರ್ವಪಕ್ಷ ಸಭೆ ನಡೆಯುತ್ತಿದೆ. 

ಎರಡನೇ ಬಾರಿ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಸರ್ವಪಕ್ಷ ಸಭೆಯ ನೇತೃತ್ವವಹಿಸಿರುವ ಮೋದಿ, ಸುಗಮ ಅಧಿವೇಶನಕ್ಕಾಗಿ ಪ್ರತಿಪಕ್ಷಗಳ ಸಹಕಾರ ಕೋರಿದರು.

ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ, ರಾಜ್ಯಸಭೆಯ ಬಿಜೆಪಿ ನಾಯಕ ಥಾವರ್ ಚಂದ್ ಗೆಹ್ಲೋಟ್, ಸಮಾಜವಾದಿ ಪಕ್ಷದ ಮುಖಂಡರಾದ ರಾಮ್ ಗೋಪಾಲ್ ಯಾದವ್, ಟಿಎಂಸಿಯ ಡೆರೆಕ್ ಒ'ಬ್ರಿಯೆನ್, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಫಾರೂಖ್ ಅಬ್ದುಲ್ಲಾ, ಎನ್ ಸಿಪಿಯ ಸುಪ್ರಿಯಾ ಸುಳೆ, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್, ಮತ್ತಿತರರರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

Scroll to load tweet…

17 ನೇ ಲೋಕಸಭೆಯ ಪ್ರಥಮ ಅಧಿವೇಶನ ನಾಳೆಯಿಂದ ಜುಲೈ. 26ರವರೆಗೆ ನಡೆಯಲಿದೆ. ಜುಲೈ 5 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಅಧಿವೇಶದ ಮೊದಲ ಎರಡು ದಿನ ನೂತನ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್ 19 ರಂದು 17ನೇ ಲೋಕಸಭೆಯ ಸ್ಪೀಕರ್ ಹುದ್ದೆಗಾಗಿ ಚುನಾವಣೆ ನಡೆಯಲಿದೆ.