ಮೇಶ್ವರಂ ಹಾಗೂ ಅಯೋಧ್ಯೆ ನಡುವೆ ಸಂಪರ್ಕವೇರ್ಪಡಿಸುವ ಶ್ರದ್ಧಾ ಸೇತು ಎಕ್ಸ್'ಪ್ರೆಸ್ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ. ವಾರಕೊಮ್ಮೆ ರಾಮೇಶ್ವರಂನಿಂದ ಹೊರಟು ಅಯೋಧ್ಯೆ ಮೂಲಕ ರಾಮೇಶ್ವರಂಗೆ ಮರಳುವ ಈ ರೈಲು ರಾಮನಿಗೆ ಸಂಬಂಧಪಟ್ಟ 2 ಸ್ಥಳಗಳನ್ನು ಜೋಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ರಾಮೇಶ್ವರಂ: ರಾಮೇಶ್ವರಂ ಹಾಗೂ ಅಯೋಧ್ಯೆ ನಡುವೆ ಸಂಪರ್ಕವೇರ್ಪಡಿಸುವ ಶ್ರದ್ಧಾ ಸೇತು ಎಕ್ಸ್'ಪ್ರೆಸ್ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ.
ವಾರಕೊಮ್ಮೆ ರಾಮೇಶ್ವರಂನಿಂದ ಹೊರಟು ಅಯೋಧ್ಯೆ ಮೂಲಕ ರಾಮೇಶ್ವರಂಗೆ ಮರಳುವ ಈ ರೈಲು ರಾಮನಿಗೆ ಸಂಬಂಧಪಟ್ಟ 2 ಸ್ಥಳಗಳನ್ನು ಜೋಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ರಾಮೇಶ್ವರಂನಿಂದ 15 ಕಿ.ಮೀ ದೂರದ ಮಂಡಪಂದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲಿಗೆ ಚಾಲನೆ ನೀಡಿದ ಮೋದಿ, ರಾಮೇಶ್ವರಂ ರಾಮನೊಂದಿಗೆ ಸಂಬಂಧಹೊಂದಿದೆ. ಈ ರೈಲು ರಾಮನ ಜನ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುತ್ತಿರುವುದು ಸಂತೋಷವನ್ನುಂಟು ಮಾಡಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಈ ರೈಲು ಜೈವಿಕ ಶೌಚಲಯದ ವ್ಯವಸ್ಥೆಯನ್ನು ಹೊಂದಿದ್ದು ಕೇಂದ್ರ ಸರ್ಕಾರದ ಸ್ವಚ್ಛ ಭಾರತದ ಉದ್ದೇಶವನ್ನು ಕೂಡಾ ಈಡೇರಿಸುತ್ತದೆ ಎಂದು ಹೇಳಿದ್ದಾರೆ.
