ಈ ಕ್ಷುದ್ರ ಗ್ರಹದಲ್ಲಿ ಸಮುದ್ರವಿದೆಯಂತೆ
ಭೂಮಿಯಲ್ಲಿರುವ ಉಪ್ಪು ನೀರಿನ ಸರೋವರದಂತೆ ಪ್ಲೂಟೊ ಕ್ಷುದ್ರ ಗ್ರಹದಲ್ಲೂ ಉಪ್ಪು ನೀರಿನ ಸಮುದ್ರ ಇರುವ ಬಗ್ಗೆ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಹಿಮದಿಂದಲೇ ಆವೃತವಾಗಿರುವ ಪ್ಲೂಟೊದಲ್ಲಿ ಉಪ್ಪಿನಾಂಶಗಳು ಪತ್ತೆಯಾಗಿದ್ದು, 100 ಕಿ.ಮೀ ವ್ಯಾಪ್ತಿಯಲ್ಲಿ ಸಮುದ್ರ ಇರುವ ಸಾಧ್ಯತೆಗಳಿದೆ ಎಂದು ಅಧ್ಯಯನ ತಿಳಿಸಿದೆ. ಕಳೆದ ವರ್ಷ ಪ್ಲೂಟೊವಿನಲ್ಲಿ ಕಾರ್ಯಾಚರಣೆ ನಡೆಸಿದ್ದ ನಾಸಾ ವಿಜ್ಞಾನಿಗಳು ದ್ರವ ರೂಪದ ಅಂಶಗಳಿವೆ ಎಂದು ತಿಳಿಸಿತ್ತು. ಅಮೆರಿಕದ ಬ್ರೌನ್ ವಿವಿಯ ಭೂಗೋಳ ಶಾಸಜ್ಞ ಬ್ರಾಂಡೊನ್ ಜಾನ್ಸನ್ ನೇತೃತ್ವದ ತಂಡ ಪ್ಲೂಟೊದಲ್ಲಿರುವ ದ್ರವರೂಪದ ವಸ್ತು ಯಾವ ಪ್ರಮಾಣದಲ್ಲಿದೆ ಎಂಬುದರ ಬಗ್ಗೆ ಕೈಗೊಂಡ ಅಧ್ಯಯನದಲ್ಲಿ ಸಮುದ್ರ ಇರುವ ಅಂಶ ಪತ್ತೆಯಾಗಿದೆ.