ಬಳ್ಳಾರಿಯಿಂದ ಬೆಂಗಳೂರಿಗೆ ಕೇವಲ 999 ರು.ನಲ್ಲಿ ವಿಮಾನದಲ್ಲಿ ಪ್ರಯಾಣಿಸಿ

Plane Service Bellary To Bengaluru
Highlights

ಕೇಂದ್ರ ಸರ್ಕಾರದ ‘ಉಡಾನ್’ ಯೋಜನೆಯಡಿ ಟ್ರೂಜೆಟ್ ವಿಮಾನ ಸಂಸ್ಥೆ ಮಾರ್ಚ್ 1ರಿಂದ ಬಳ್ಳಾರಿ ಯಿಂದ ಬೆಂಗಳೂರಿಗೆ ವಿಮಾನ ಸೇವೆ ಆರಂಭಿಸಲಿದ್ದು, 999ರುಗೆ ಟಿಕೆಟ್ ದರ ನಿಗದಿ ಮಾಡಲಾಗಿದೆ. ‘ಸಂಡೂರು ತಾಲೂಕಿನ ಜಿಂದಾಲ್ (ವಿದ್ಯಾನಗರ) ವಿಮಾನ ನಿಲ್ದಾಣ ದಿಂದ ಬೆಂಗಳೂರಿಗೆ ವಿಮಾನ ಹಾರಾಟ ನಡೆಸಲಿದೆ.

ಬಳ್ಳಾರಿ: ಕೇಂದ್ರ ಸರ್ಕಾರದ ‘ಉಡಾನ್’ ಯೋಜನೆಯಡಿ ಟ್ರೂಜೆಟ್ ವಿಮಾನ ಸಂಸ್ಥೆ ಮಾರ್ಚ್ 1ರಿಂದ ಬಳ್ಳಾರಿ ಯಿಂದ ಬೆಂಗಳೂರಿಗೆ ವಿಮಾನ ಸೇವೆ ಆರಂಭಿಸಲಿದ್ದು, 999ರುಗೆ ಟಿಕೆಟ್ ದರ ನಿಗದಿ ಮಾಡಲಾಗಿದೆ. ‘ಸಂಡೂರು ತಾಲೂಕಿನ ಜಿಂದಾಲ್ (ವಿದ್ಯಾನಗರ) ವಿಮಾನ ನಿಲ್ದಾಣ ದಿಂದ ಬೆಂಗಳೂರಿಗೆ ವಿಮಾನ ಹಾರಾಟ ನಡೆಸಲಿದೆ.

ಉಡಾನ್ ಯೋಜನೆಯಡಿ ಈಗಾಗಲೇ ಬಳ್ಳಾರಿಯಿಂದ ಹೈದರಾದಾಬಾದ್‌ಗೆ ಟ್ರೂಜೆಟ್ ಸಂಸ್ಥೆಯು ವಿಮಾನ ಹಾರಾಟ ನಡೆಸುತ್ತಿದೆ. ಇದೀಗ ಬೆಂಗಳೂರಿಗೆ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ.

ಬಳ್ಳಾರಿಯಿಂದ 1 ಗಂಟೆಯಲ್ಲಿ ಬೆಂಗಳೂರು ತಲುಪಬಹುದು’ ಎಂದು ಟ್ರೂಜೆಟ್ ಸಂಸ್ಥೆಯ ಮಾಧ್ಯಮ ಸಂಪರ್ಕ ಅಧಿಕಾರಿ ಸೇಂಥಿಲ್ ರಾಜ್ ತಿಳಿಸಿದ್ದಾರೆ. ‘ಜಿಂದಾಲ್ ವಿಮಾನ ನಿಲ್ದಾಣದಿಂದ ಪ್ರತಿನಿತ್ಯ ಮಧ್ಯಾಹ್ನ 2 ಗಂಟೆಗೆ ವಿಮಾನ ಹೊರಡಲಿದೆ. ಬೆಂಗಳೂರಿನಿಂದ ಬಳ್ಳಾರಿಗೆ ಬರಲು ಅಲ್ಲಿಂದ ಮಧ್ಯಾಹ್ನ 3.30ಕ್ಕೆ ವಿಮಾನ ಸೌಲಭ್ಯವಿದೆ’ ಎಂದಿದ್ದಾರೆ.

 

loader