ತಮ್ಮ ಸಾಧನೆಗಳನ್ನು ಹೇಳಿಕೊಳ್ಳಲು ಯಾವ್ಯಾವುದೋ ಫೋಟೊಗಳನ್ನು ಬಳಸುವ ಪ್ರವೃತ್ತಿ ಕೇಂದ್ರ ಸರ್ಕಾರ ಸಚಿವರು ಮುಂದುವರೆಸಿದ್ದು, ಈ ಬಾರಿ ಕೇಂದ್ರ ಇಂಧನ ಸಚಿವ ಪಿಯುಶ್ ಗೋಯಲ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗೊಳಗಾಗಿದ್ದಾರೆ.

ನವದೆಹಲಿ: ತಮ್ಮ ಸಾಧನೆಗಳನ್ನು ಹೇಳಿಕೊಳ್ಳಲು ಯಾವ್ಯಾವುದೋ ಫೋಟೊಗಳನ್ನು ಬಳಸುವ ಪ್ರವೃತ್ತಿ ಕೇಂದ್ರ ಸರ್ಕಾರ ಸಚಿವರು ಮುಂದುವರೆಸಿದ್ದು, ಈ ಬಾರಿ ಕೇಂದ್ರ ಇಂಧನ ಸಚಿವ ಪಿಯುಶ್ ಗೋಯಲ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗೊಳಗಾಗಿದ್ದಾರೆ.

ರಷ್ಯಾದ ರಸ್ತೆಯೊಂದರ ಫೋಟೋ ಬಳಸಿ, ರಾಷ್ಟ್ರೀಯ ಬೀದಿ ದೀಪ ಯೊಜನೆಯಡಿಯಲ್ಲಿ ದೇಶದ 50 ಸಾವಿರ ಕಿ.ಮಿ. ಉದ್ದದ ರಸ್ತೆಗಳಿಗೆ ಎಲ್’ಇಡಿ ದೀಪಗಳನ್ನು ಅಳವಡಿಸಲಾಗದೆ ಎಂದು ಪಿಯುಶ್ ಗೋಯಲ್ ಟ್ವೀಟಿಸಿದ್ದರು.

ಟ್ವಿಟ್ಟರ್’ನಲ್ಲಿ ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿದ್ದು, ಪ್ರಮಾದದ ಅರಿವಾಗುತ್ತಿದ್ದಂತೆ ಗೋಯಲ್ ಆ ಫೋಟೊವನ್ನು ಡಿಲೀಟ್ ಮಾಡಿದ್ದಾರೆ.

ಕಳೆದ ಏಪ್ರಿಲ್’ನಲ್ಲಿ ಕೇಂದ್ರ ಸಚಿವ ಬಾಬುಲಾಲ್ ಸುಪ್ರಿಯೋ, ಅಸ್ತಿತ್ವದಲ್ಲಿಲ್ಲದ ಬಸ್ ನಿಲ್ದಾಣದ ಫೋಟೋ ಹಾಕಿ, ಅದು ರಾಜ್'ಕೋಟ್'ನಲ್ಲಿ ಉದ್ಘಾಟನೆಗೊಂಡ ನೂತನ ನಿಲ್ದಾಣವೆಂದು ಟ್ವೀಟಿಸಿದ್ದರು.

ಕಳೆದ ಜೂನ್’ನಲ್ಲಿ ಗೃಹ ಇಲಾಖೆಯ ವಾರ್ಷಿಕ ವರದಿಯಲ್ಲಿ ಸ್ಪೇನ್-ಮೊರೊಕ್ಕೋ ಗಡಿಯ ಚಿತ್ರ ಹಾಕಿ, ಅದು ಭಾರತ-ಪಾಕಿಸ್ತಾದ ಗಡಿಯಲ್ಲಿ ಹಾಕಲಾಗಿರುವ ಹೊನಲು ಬೆಳಕಿನ ದೀಪಸ್ತಂಭಗಳೆಂದು ಹೇಳಲಾಗಿತ್ತು.