ಸಾಗರ್‌[ಫೆ.24]: ತಹಸೀಲ್ದಾರ್‌ಗೆ ಲಂಚ ನೀಡಲು ಹಣವಿಲ್ಲದೇ ರೈತನೊಬ್ಬ ಎಮ್ಮೆಯನ್ನೇ ನೀಡಿದ ಘಟನೆ ಮಧ್ಯಪ್ರದೇಶದ ಟಿಕಮ್‌ಗಡ ಜಿಲ್ಲೆಯಲ್ಲಿ ನಡೆದಿದೆ.

ಲಕ್ಷ್ಮೇ ಯಾದವ (50) ಲಂಚದ ಬದಲಾಗಿ ಎಮ್ಮೆಯನ್ನೇ ತಹಸೀಲ್ದಾರನ ವಾಹನಕ್ಕೆ ಕಟ್ಟಿತೆಗೆದುಕೊಂಡು ಹೋಗುವಂತೆ ಹೇಳಿದ ವ್ಯಕ್ತಿ. ಈತನ ಹೆಸರಿಗೆ ಜಮೀನನ್ನು ವರ್ಗಾವಣೆ ಮಾಡಿಕೊಡಲು ತಹಸೀಲ್ದಾರ 1ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದರಲ್ಲಿ 50ಸಾವಿರವನ್ನು ರೈತ ನೀಡಿದ್ದ. ಆದಾಗ್ಯೂ ಅವನ ಜಮೀನು ವರ್ಗಾವಣೆ ಆಗದೇ ಇದ್ದಾಗ, ಬಾಕಿ ಲಂಚದ ಹಣ ನೀಡಲಾಗದೇ ತಮ್ಮ ಎಮ್ಮೆಯನ್ನೆ ತಂದು ತಹಸೀಲ್ದಾರ್‌ರ ಸರ್ಕಾರಿ ವಾಹನಕ್ಕೆ ಕಟ್ಟಿಹಾಕಿದ.

ಇದನ್ನರಿತ ಜಿಲ್ಲಾಧಿಕಾರಿ ಸೌರವ್‌ಕುಮಾರ ಸುಮನ್‌, ಸಮಗ್ರ ವಿಚಾರಣೆಗೆ ಬಾಲದೇವಗಡದ ಉಪವಿಭಾಗಾಧಿಕಾರಿಗೆ ಸೂಚಿಸಿದ್ದಾರೆ.