ಅದರಲ್ಲೂ ಮುಖ್ಯವಾಗಿ ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ನಿರ್ವಹಿಸದ ಯೋಜನಾ ವ್ಯವಸ್ಥಾಪಕರು, ಹಿರಿಯ ತಂತ್ರಜ್ಞರು ಸೇರಿದಂತೆ 1000 ನೌಕರರಿಗೆ ಗೇಟ್‌ಪಾಸ್‌ ನೀಡಲು ಇಸ್ಫೋಸಿಸ್‌ ನಿರ್ಧರಿಸಿದೆ ಎನ್ನಲಾಗಿದೆ.

ನವದೆಹಲಿ: 2008ರಲ್ಲಿ ಮಾಹಿತಿ ತಂತ್ರಜ್ಞಾನ ವಲಯದ ಉದ್ಯೋಗಿಗಳನ್ನು ಕಾಡಿದ್ದ ಪಿಂಕ್‌ಸ್ಲಿಪ್‌ (ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದು) ಭೀತಿ, ಇದೀಗ ಮತ್ತೊಮ್ಮೆ ಐಟಿ ವಲಯವನ್ನು ಕಾಡತೊಡಗಿದೆ.

ಅದರಲ್ಲೂ ಮುಖ್ಯವಾಗಿ ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ನಿರ್ವಹಿಸದ ಯೋಜನಾ ವ್ಯವಸ್ಥಾಪಕರು, ಹಿರಿಯ ತಂತ್ರಜ್ಞರು ಸೇರಿದಂತೆ 1000 ನೌಕರರಿಗೆ ಗೇಟ್‌ಪಾಸ್‌ ನೀಡಲು ಇಸ್ಫೋಸಿಸ್‌ ನಿರ್ಧರಿಸಿದೆ ಎನ್ನಲಾಗಿದೆ.

ಇನ್ನು ಕಾಗ್ನಿಜೆಂಟ್‌, ಕ್ಯಾಪ್‌ಜೆಮಿನಿ, ಭಾರತದ ವಿಪ್ರೊ ಸೇರಿದಂತೆ ಹಲವು ಸಂಸ್ಥೆಗಳು ಕೆಲ ನೌಕರರಿಗೆ ಸ್ವಯಂ ನಿವೃತ್ತಿ ಘೋಷಿಸಿಕೊಳ್ಳುವಂತೆ ಸೂಚನೆ ನೀಡಿವೆ. ಕಾಗ್ನಿಜೆಂಟ್‌ ಪ್ರಸ್ತುತ ವರ್ಷ 6 ಸಾವಿರ ಹುದ್ದೆ, ಕ್ಯಾಪ್‌ಜೆಮಿನಿ 9 ಸಾವಿರ ನೌಕರರನ್ನು ಮನೆಗೆ ಕಳುಹಿಸಲು ಮುಂದಾಗಿದೆ. ಐಟಿ ಕಂಪನಿಗಳ ಈ ನಿರ್ಧಾರದಿಂದಾಗಿ ಸದ್ಯಕ್ಕೆ ಹಿರಿಯ ಮತ್ತು ಮಧ್ಯಮ ಹಂತದಲ್ಲಿ ಕಾರ್ಯ ನಿರ್ವಹಿಸುವ ನೌಕರರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ.