'ಪಿಂಕ್ ಹೀರೋ'ಗಳನ್ನು ಗುರುತಿಸಿ ಅವರನ್ನು ಗೌರವಿಸುವ ಮಹತ್ವದ ಕಾರ್ಯಕ್ಕೆ 'ಪಿಂಕ್ ಸಮಾರಿಟನ್' ಸಹಭಾಗಿತ್ವದಲ್ಲಿ ಸುವರ್ಣ ನ್ಯೂಸ್ ಸೇರಿದಂತೆ ಏಷ್ಯಾನೆಟ್ ಸಮೂಹ ಸಂಸ್ಥೆಗಳು ತಯಾರಾಗಿದ್ದು, 2017ರ ನವೆಂಬರ್ 7ರಂದು 'ಪಿಂಕ್ ಹೀರೋ'ಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿವೆ.

ಮಹಿಳೆಯರ ಮೇಲೆ‌ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಹಾಗೂ ಮಹಿಳೆಯರು ತಮ್ಮನ್ನು ತಾವು ಕಾಪಾಡಿಕೊಳ್ಳುಯವ ಸಲುವಾಗಿ ಏಷಿಯಾನೆಟ್ ನ್ಯೂಸೇಬಲ್ ಹಾಗು ಸುವರ್ಣ ನ್ಯೂಸ್ ವತಿಯಿಂದ ಈ ಹಿಂದೆ ಪಿಂಕ್ ಸಮಾರಿಟನ್ ಎಂಬ ನೂತನ ಆ್ಯಪ್ ಒಂದು ಬಿಡುಗಡೆಗೊಂಡಿತ್ತು. ಇದೀಗ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಹಾಗೂ ಅವರ ರಕ್ಷಣೆಗಾಗಿ ಧ್ವನಿ ಎತ್ತಿದ 'ಪಿಂಕ್ ಹೀರೋಸ್'ಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ಕೆ ಸುವರ್ಣ ನ್ಯೂಸ್ ಹಾಗೂ ಏಷ್ಯಾನೆಟ್ ಸಮೂಹ ಸಂಸ್ಥೆಗಳು ಅಣಿಯಾಗಿವೆ.

ನಮ್ಮ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು, ಅವರ ರಕ್ಷಣೆಗಾಗಿ ಧ್ವನಿ ಎತ್ತಿದವರು ನಮ್ಮೊಂದಿಗಿದ್ದಾರೆ. ಇಂತಹ 'ಆಕೆ'ಯ ಸುರಕ್ಷತೆಗಾಗಿ ಹೋರಾಡಿದ 'ಆತ' . ಇಂತಹ 'ಪಿಂಕ್ ಹೀರೋ'ಗಳನ್ನು ಗುರುತಿಸಿ ಅವರನ್ನು ಗೌರವಿಸುವ ಮಹತ್ವದ ಕಾರ್ಯಕ್ಕೆ 'ಪಿಂಕ್ ಸಮಾರಿಟನ್' ಸಹಭಾಗಿತ್ವದಲ್ಲಿ ಸುವರ್ಣ ನ್ಯೂಸ್ ಸೇರಿದಂತೆ ಏಷ್ಯಾನೆಟ್ ಸಮೂಹ ಸಂಸ್ಥೆಗಳು ತಯಾರಾಗಿದ್ದು, 2017ರ ನವೆಂಬರ್ 7ರಂದು 'ಪಿಂಕ್ ಹೀರೋ'ಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿವೆ.

ಮಹಿಳೆಯರ ಸುರಕ್ಷತೆಗಾಗಿ ಶ್ರಮಿಸಿದ, ಅವರ ಪರವಾಗಿ ಧ್ವನಿ ಎತ್ತಿದ 'ಪಿಂಕ್ ಹೀರೋ'ಗಳ ಸಂಖ್ಯೆ ನಮ್ಮ ಮಧ್ಯೆ ಇನ್ನೂ ಹೆಚ್ಚಲಿ, ಈ ಮೂಲಕ ಮಹಿಳೆಯರು ಸಮಾಜದಲ್ಲಿ ನೆಮ್ಮದಿಯುತ ಬದುಕು ಸಾಗಿಸುವುದರೊಂದಿಗೆ ಉತ್ತಮ ಸಮಾಜದ ನಿರ್ಮಾಣವಾಗಲಿ ಎಂಬುವುದು ನಮ್ಮ ಆಶಯ.