ಭುವನೇಶ್ವರ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೆಳಕ್ಕೆ ಬಿದ್ದ ಫೋಟೊಗ್ರಾಫರ್ ಓರ್ವರನ್ನು ಓಡಿ ಬಂದು ರಕ್ಷಿಸಿ ಮಾನವೀಯತೆ ಮೆರೆದ ಘಟನೆಯೊಂದು ನಡೆದಿದೆ.  

 ಕಾಂಗ್ರೆಸ್ ಮುಖಂಡರೆಲ್ಲರೂ ಕೂಡ ಒಂದೆಡೆ ಸೇರದ್ದ ವೇಳೆ  ಕೆಳಕ್ಕೆ ನಿಂತುಕೊಂಡು ಫೊಟೊ ತೆಗೆಯುತ್ತಿದ್ದ  ಫೋಟೊಗ್ರಾಫರ್ ಉರುಳಿ ಬಿದ್ದಿದ್ದಾರೆ. 

ಆತ ಕೆಳಕ್ಕೆ ಉರುಳುವುದನ್ನು ಕಂಡು ಮೇಲಿಂದ ಓಡಿ ಬಂದ ರಾಹುಲ್ ಅವರನ್ನು ಮೇಲಕ್ಕೆತ್ತಿದ್ದಾರೆ. 

ಭುವನೇಶ್ವರ್ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾವೇಶಕ್ಕೆ ತೆರಳಲು ಸಜ್ಜಾಗಿದ್ದರು. ಈ ವೇಳೆ ಒಂದೆಡೆ ಸೇರಿದ್ದರು. ಈ ವೇಳೆ ಕೆಳಕ್ಕೆ ಬಿದ್ದ ಫೋಟೊಗ್ರಾಫರ್ ರಕ್ಷಿಸಿ ರಾಹುಲ್ ಮಾನವೀಯತೆ ಮೆರೆದಿದ್ದಾರೆ.