ಜೈಲಿನೊಳಗಿದ್ದೇ ಸ್ಟೇಟಸ್ ಅಪ್ಡೇಟ್ ಮಾಡಿದವನಿಗೇನಾಯ್ತು?

First Published 22, Jun 2018, 3:39 PM IST
Philippine former senator : Bong Revilla's mobile phone confiscated after FB update
Highlights

ಜೈಲಿನ ಒಳಗೆ ಇದ್ದ ಆತ ಪ್ರಸಿದ್ಧ ವ್ಯಕ್ತಿ. ಆತಮನ ಕೈನಲ್ಲಿ ಮೊಬೈಲ್ ಇತ್ತು. ಇದು ಭಾರತದ ಸುದ್ದಿಯಾಗಿದ್ದರೆ ಆಶ್ಚರ್ಯವೇನೂ ಇರುತ್ತಿರಲಿಲ್ಲ ಬಿಡಿ. ಆದರೆ ಇದು ವಿದೇಶದ ಸುದ್ದಿ. ಇದೀಗ ಪೊಲೀಸರು ಆತನ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಏನಿದು ಸುದ್ದಿ ಮುಂದೆ ಓದಿ...

ಫಿಲಿಫೈನ್ಸ್ (ಜೂ 22) ಜೈಲಿನ ಒಳಗೆ ಇದ್ದ ಆತ ಪ್ರಸಿದ್ಧ ವ್ಯಕ್ತಿ. ಆತನ ಕೈನಲ್ಲಿ ಮೊಬೈಲ್ ಇತ್ತು. ಇದು ಭಾರತದ ಸುದ್ದಿಯಾಗಿದ್ದರೆ ಆಶ್ಚರ್ಯವೇನೂ ಇರುತ್ತಿರಲಿಲ್ಲ ಬಿಡಿ. ಆದರೆ ಇದು ವಿದೇಶದ ಸುದ್ದಿ. ಜೈಲಿನೊಳಗಿದ್ದ ಫಿಲಿಫೈನ್ಸ್ ನ ಮಾಜಿ ಸೆನೆಟರ್, ನಟ, ನಿರ್ದೇಶಕ ರಾಮೋನ್ ಬೋಂಗ್ ರೆವಿಲ್ಲಾ ಜೆಆರ್ ಅವರ ಮೊಬೈಲ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆದದ್ದೇನು? ಕಳೆದ ನಾಲ್ಕು ವರ್ಷದಿಂದ ಜೈಲಿನಲ್ಲಿರುವ ಬೋಂಗ್ ರೆವಿಲ್ಲಾ ಜೆಆರ್ ಜೂನ್ 20 ರಂದು ಫೇಸ್ ಬುಕ್ ನಲ್ಲಿ ಸ್ಟೇಟಸ್ ವೊಂದನ್ನು ಅಪ್ ಡೇಟ್ ಮಾಡಿದ್ದಾರೆ. ಇದನ್ನು ಸ್ಫಳೀಯ ಮಾಧ್ಯಮವೊಂದು ವರದಿ ಮಾಡಿತ್ತು.

ಜೈಲಿನಲ್ಲಿ ಇದು ನನ್ನ ನಾಲ್ಕನೇ ವರ್ಷ. ನಾಲ್ಕು ವರ್ಷದಿಂದ ಕುಟುಂಬ ಮತ್ತು ಮಕ್ಕಳನ್ನು ಬಿಟ್ಟು ದೂರವಿದ್ದೇನೆ ಎಂದು ಬರೆದುಕೊಂಡಿದ್ದೆ ಅವರಿಗೆ ಮುಳುವಾಗಿದೆ. ಸರ್ ಪ್ರೈಸ್ ವಿಸಿಟ್ ನೀಡಿದ ಪೊಲೀಸರು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಸರಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದ ಆರೋಪದ ಮೇಲೆ ಬೋಂಗ್ ರೆವಿಲ್ಲಾ ಅವರನ್ನು ಬಂಧಿಸಲಾಗಿತ್ತು.


 

loader