ಒಂದು ವೇಳೆ ಪೆಟ್ರೋಲ್ ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ಶೇ.70ರಷ್ಟಿರುವ ತೆರಿಗೆ ರದ್ದಾಗಿ ಶೇ.12 ಅಥವಾ ಶೇ.18 ರಷ್ಟು ತೆರಿಗೆ ವಿಧಿಸಲಾಗುತ್ತದೆ.
ನವದೆಹಲಿ(ಸೆ.18): ಪೆಟ್ರೋಲ್ ದರದಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಹೌದು ಪೆಟ್ರೋಲ್ ಜಿಎಸ್ಟಿ ಪದ್ಧತಿಯ ವ್ಯಾಪ್ತಿಗೆ ಬಂದರೆ ಈಗಿನ ದರದಿಂದ ಗಣನೀಯವಾಗಿ ಇಳಿಮುಖವಾಗಲಿದೆ.
ಏಕೆಂದರೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಈಗ ವಿಧಿಸುತ್ತಿರುವ ವ್ಯಾಟ್ ಸೇರಿದಂತೆ ಬಹುತೇಕ ಎಲ್ಲ ತೆರಿಗೆಗಳು ರದ್ದಾಗಲಿವೆ. ಇದರ ಪರಿಣಾಮ ಪೆಟ್ರೋಲ್ ದರ 70 ರೂ.ಗಳಿಂದ 38 ರೂ.ಗೆ ಇಳಿದರೂ ಅಚ್ಚರಿ ಇಲ್ಲ . ದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 70 ರೂ. ಇದೆ. ಜಿಎಸ್ಟಿ ಪದ್ಧತಿಯಡಿಯಲ್ಲಿ ಶೇ.12 ತೆರಿಗೆ ದರ ಇದ್ದರೆ 38.10 ರೂ.ಗೆ ಪೆಟ್ರೋಲ್ ದೊರೆಯಲಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ಅಡಿಗೆ ತರಲಾಗಿದೆ ಎಮದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಜಿಎಸ್ಟಿ ಆದರೇನಾಗುತ್ತೆ?
ಹಾಲಿ ದೆಹಲಿಯಲ್ಲಿ 1 ಲೀ. ಪೆಟ್ರೋಲ್ ಬೆಲೆ 70.43 ರು. ಇದೆ. ಇದರಲ್ಲಿ ಶೇ.70 ಪಾಲು ವಿವಿಧ ರೀತಿಯ ಕೇಂದ್ರ ಮತ್ತು ರಾಜ್ಯ ತೆರಿಗೆಗಳದ್ದು. ಒಂದು ವೇಳೆ ಪೆಟ್ರೋಲ್ ಜಿಎಸ್ಟಿ ವ್ಯಾಪ್ತಿಗೆ ಬಂದರೆ ಶೇ.70ರಷ್ಟಿರುವ ತೆರಿಗೆ ರದ್ದಾಗಿ ಶೇ.12 ಅಥವಾ ಶೇ.18 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಹೀಗಾದಲ್ಲಿ ಪೆಟ್ರೋಲ್ ಬೆಲೆ ಲೀ.ಗೆ 40 -50 ರು.ಗೆ ಸಿಗುತ್ತದೆ. ದೇಶಾದ್ಯಂತ ಒಂದೇ ದರಕ್ಕೆ ಪೆಟ್ರೋಲಿಯಂ ಉತ್ಪನ್ನಗಳು ಸಿಗುತ್ತದೆ.
ರಾಜ್ಯಗಳು ಒಪ್ಪುತ್ತವಾ?
ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್ ಬಂದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಭಾರೀ ಆದಾಯ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಬೀದಿಗಿಳಿದು ಹೋರಾಟ ನಡೆಸುವ ವಿಪಕ್ಷಗಳು, ಕೇಂದ್ರದ ಆಗ್ರಹಕ್ಕೆ ಮಣಿದು, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸಲು ಒಪ್ಪುತ್ತವೆಯಾ ಅಥವಾ ತಮ್ಮ ಹೋರಾಟವನ್ನು ಕೇವಲ ರಾಜಕೀಯಕ್ಕೆ ಸೀಮಿತಗೊಳಿಸುತ್ತವೆಯಾ ಎಂದು ಕಾದು ನೋಡಬೇಕು.
