ಮಧುಗಿರಿ: ಪೆಟ್ರೋಲ್ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದ್ದರಿಂದ ಸಾರ್ವಜನಿಕರು ಕೆಲ ಕಾಲ ಆತಂಕಕ್ಕೆ ಒಳಗಾದ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೊಬಳಿಯ ಯಾಕಾರ್ಲಹಳ್ಳಿ ಕಡಗತ್ತೂರು ರಸ್ತೆಯಲ್ಲಿ ನಡೆದಿದೆ.

ಶನಿವಾರ ಬೆಳಗ್ಗೆ 11 ರ ಸುಮಾರಿಗೆ ಪೆಟ್ರೋ ಲ್ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿದೆ ಬಿದ್ದಿದೆ. ತಕ್ಷಣ ಸುತ್ತಮುತ್ತಲಿನ ಗ್ರಾಮಸ್ಥರು ಬಿಂದಿಗೆ, ನೀರಿನ ಡಬ್ಬಗಳೊಂದಿಗೆ ದೌಡಾಯಿಸಿ ಸೋರಿಕೆ ಯಾಗುತಿದ್ದ ಪೆಟ್ರೋಲ್ ತುಂಬಿಕೊಳ್ಳಲು ಮುಗಿಬಿದ್ದು ಪೆಟ್ರೋಲ್ ತುಂಬಿಕೊಳ್ಳುವಲ್ಲಿ ನಿರತರಾದರು. 

ಪಿಎಸ್‌ಐ ಮೋಹನ್ ಕುಮಾರ್ ಟ್ಯಾಂಕರನ್ನು ತೆರವು ಮಾಡಿದರು.