ಜುಲೈಗಿಂತ ಮೊದಲು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ದರದನ್ವಯ ಪ್ರತೀ 15 ದಿನಕ್ಕೊಮ್ಮೆ ದರ ಪರಿಷ್ಕರಣೆಯಾಗುತ್ತಿತ್ತು. ಈಗ ಜೂನ್ 16ರಿಂದ ನಿತ್ಯ ದರ ಪರಿಷ್ಕರಣೆ ಆಗುತ್ತಿರುವುದೂ ಕೂಡ ಅಂತಾರಾಷ್ಟ್ರೀಯ ಮಾರುಕಟ್ಟೆ ದರದ ಪ್ರಕಾರವೇ.

ಬೆಂಗಳೂರು(ಆ. 27): ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ನಿತ್ಯ ಪರಿಷ್ಕರಣೆ ಮಾಡುವ ನಿರ್ಧಾರ ಕೈಗೊಂಡ ಮೇಲೆ ಆ ಬೆಲೆಗಳು ಸದ್ದಿಲ್ಲದೇ ಏರಿಕೆಯಾಗುತ್ತಲೇ ಇವೆ. ಜುಲೈನಿಂದೀಚೆ ಪೆಟ್ರೋಲ್ ಬೆಲೆ ಬರೋಬ್ಬರಿ 6 ರೂಪಾಯಿ ಏರಿಕೆಯಾಗಿದೆ. ಒಂದು ಲೀಟರ್ ಡೀಸೆಲ್ ಬೆಲೆ 3.67 ರೂ. ಏರಿದೆ. ಪೆಟ್ರೋಲ್ ಬೆಲೆಗಳು ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ಪ್ರಮಾಣಕ್ಕೆ ಏರಿದೆ.

ಜುಲೈಗಿಂತ ಮೊದಲು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ದರದನ್ವಯ ಪ್ರತೀ 15 ದಿನಕ್ಕೊಮ್ಮೆ ದರ ಪರಿಷ್ಕರಣೆಯಾಗುತ್ತಿತ್ತು. ಈಗ ಜೂನ್ 16ರಿಂದ ನಿತ್ಯ ದರ ಪರಿಷ್ಕರಣೆ ಆಗುತ್ತಿರುವುದೂ ಕೂಡ ಅಂತಾರಾಷ್ಟ್ರೀಯ ಮಾರುಕಟ್ಟೆ ದರದ ಪ್ರಕಾರವೇ.

ಬೆಂಗಳೂರಿನಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್'ಗೆ 70.1 ರೂಪಾಯಿ ಇದೆ. ಡೀಸೆಲ್ ಬೆಲೆ 57.12 ರೂಪಾಯಿ ಇದೆ.