ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿದ ಪರಿಣಾಮವಾಗಿ ದೇಶದಲ್ಲಿ ಕಳೆದ 8 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆಯಾಗಿದೆ.
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಬದಲಾವಣೆಯಾಗದ ಪರಿಣಾಮ ಕಳೆದ ಒಂದು ವಾರದಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 2 ರು., ಮತ್ತು 1 ರು.ನಷ್ಟುಇಳಿಕೆಯಾಗಿದೆ.
ಕಳೆದ 8 ದಿನಗಳಲ್ಲಿ ಪೆಟ್ರೋಲ್ ದರವು 1.98 ರು. ಹಾಗೂ ಡೀಸೆಲ್ ದರ 96 ಪೈಸೆ ಇಳಿಕೆಯಾದ ಪರಿಣಾಮ, ದೆಹಲಿಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ದರವು ಕ್ರಮವಾಗಿ 74.73 ರು. ಮತ್ತು 80.85 ರು.ಗೆ ಇಳಿಕೆ ಆಗಿದೆ.
ಆದರೆ, ಅಕ್ಟೋಬರ್ 4ರಂದು ಪೆಟ್ರೋಲ್ ಮತ್ತು ಡೀಸೆಲ್ ದರವು ಕ್ರಮವಾಗಿ 84 ರು. ಮತ್ತು 75.45 ರು.ಗೆ ಏರಿಕೆಯಾಗಿತ್ತು.
