ಹುಬ್ಬಳ್ಳಿ :   ಸಿನಿಮಾ ನಟರ ಮೇಲೆ ನಡೆದ ಐಟಿ ದಾಳಿ ಕೇಂದ್ರದ ತೆರಿಗೆ ಇಲಾಖೆ ನಿರ್ಧಾರವಾದುದು. ಅದರಲ್ಲಿ ಯಾವುದೇ ರೀತಿ ವಿಶೇಷತೆ ಇಲ್ಲ ಎಂದು  ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. 

ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ತೆರಿಗೆ ವಂಚನೆ ಹಾಗೂ ತೆರಿಗೆ ಪಾವತಿ ಮೇಲೆ ಅನುಮಾನ ಮೂಡಿದಲ್ಲಿ ದಾಳಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 

ಇನ್ನು ಇದೇ ವೇಳೆ ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿನ ಏರಿಕೆ ಸಂಬಂಧ ಪ್ರತಿಕ್ರಿಯಿಸಿದ ಸಿಎಂ, ಪೆಟ್ರೋಲ್, ಡೀಸೆಲ್ ಬೆಲೆ ಕೇಂದ್ರ ಸರ್ಕಾರ ಇಳಿಸಿಲ್ಲ. ಆದರೆ ಇಡೀ ದೇಶದಲ್ಲಿಯೇ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಅತ್ಯಂತ ಕಡಿಮೆ ಇದೆ. ನಾವು ತೆರಿಗೆ ಏರಿಸಿದರೂ ನಮ್ಮ ಪಕ್ಕದ ರಾಜ್ಯಗಳಿಗೆ ಹೊಲಿಕೆ ಮಾಡಿದರೆ ನಮ್ಮ ದರ ಅತ್ಯಂತ ಕಡೆಮೆ ಪ್ರಮಾಣದಲ್ಲಿದೆ ಎಂದರು.  

ಸಾಲಮನ್ನಾ :  ಇನ್ನು ರಾಜ್ಯದಲ್ಲಿ ರೈತರ ಸಾಲಮನ್ನಾಗಾಗಿ ಯಾವುದೇ ಯೋಜನೆಯಿಂದಲೂ ಕೂಡ ಹಣ ಪಡೆದುಕೊಳ್ಳುತ್ತಿಲ್ಲ. ಈಗಾಗಲೇ ಸಾಲಮನ್ನಾಗಾಗಿ 6500 ಕೋಟಿ ಹಣವನ್ನು ಮೀಸಲಿಟ್ಟಿದ್ದಾಗಿ ಈ ವೇಳೆ ತಿಳಿಸಿದರು.