ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್

First Published 13, Jul 2018, 12:43 PM IST
Petrol Diesel Prices Hiked Again
Highlights

ವಾಹನ ಸವಾರರೇ ಇಲ್ಲಿದೆ ನಿಮಗೆ ಶಾಕಿಂಗ್ ನ್ಯೂಸ್. ಪದೇ ಪದೇ  ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ದರವು ಮತ್ತೊಮ್ಮೆ ಏರಿಕೆಯಾಗಿದೆ. 

ದಿಲ್ಲಿ :  ದಿನದಿನಕ್ಕೆ ಏರುಗತಿಯಲ್ಲೇ ಸಾಗುತ್ತಿರುವ ತೈಲ ದರವು ಇದೀಗ ಮತ್ತೊಮ್ಮೆ ಗ್ರಾಹಕರಿಗೆ ಶಾಕ್ ನೀಡಿದೆ. 

ಇಂಡಿಯನ್ ಆಯಿಲ್ ಕಾರ್ಪೊರೇಷನ್ ನೀಡಿದ ಮಾಹಿತಿ ಪ್ರಕಾರ ಮತ್ತೆ ತೈಲ ದರದಲ್ಲಿ ದೇಶದಾದ್ಯಂತ ಏರಿಕೆ ಕಂಡು ಕಂಡು ಬಂದಿದೆ. 

ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 76.76 ರು.ಗಳಾಗಿದೆ. ಇನ್ನು ಮುಂಬೈನಲ್ಲಿ  ಪ್ರತೀ ಲೀಟರ್ ಪೆಟ್ರೋಲ್ ದರವು 84.14ರು.ಗಳಾಗಿದೆ. 

ಇನ್ನು ಡೀಸೆಲ್ ದರದಲ್ಲಿಯೂ ಕೂಡ ಏರಿಕೆ ಕಂಡು ಬಂದಿದ್ದು, ದಿಲ್ಲಿಯಲ್ಲಿ ಪ್ರತೀ ಲೀಟರ್ ಡೀಸೆಲ್ ದರ 68.43ರಷ್ಟಿದೆ. ಮುಂಬೈನಲ್ಲಿ 72.61 ರು.ಗಳಿದೆ. 

ನೂತನ ದರವು ಜುಲೈ 13ರ ಬೆಳಗ್ಗೆಯಿಂದಲೇ ಗ್ರಾಹಕರಿಗೆ ಅನ್ವಯವಾಗುತ್ತಿದೆ. ಇನ್ನು ಮೇ 30 ರಂದು ಪೆಟ್ರೋಲ್ ಹಾಗೂ ಡೀಸೆಲ್ ದರವು  ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯಾಗಿ ದಾಖಲೆ ನಿರ್ಮಿಸಿತ್ತು.

loader