ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

ನವದೆಹಲಿ (ಜ.01):  ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಏರಿಕೆ ಮಾಡಲಾಗಿದೆ.

ಪೆಟ್ರೋಲ್  ಪ್ರತಿ ಲೀಟರ್ ಬೆಲೆಯಲ್ಲಿ ರೂ.1.29 ಏರಿಕೆಯಾಗಿದ್ದರೆ, ಡೀಸೆಲ್ ದರದಲ್ಲಿ 97 ಪೈಸೆ ಏರಿಕೆಯಾಗಿದೆ.

ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

ಕಳೆದ ತಿಂಗಳಲ್ಲಿ 2 ಬಾರಿ ತೈಲ ದರ ಪರಿಷ್ಕರಣೆಯಾಗಿದ್ದು, ಡಿಸೆಂಬರ್ 1ರಂದು ಪೆಟ್ರೋಲ್ 13 ಪೈಸೆ ಮತ್ತು ಡೀಸೆಲ್ 12 ಪೈಸೆ ಏರಿಕೆ ಕಂಡಿತ್ತು.