ಪೆಟ್ರೋಲ್, ಡೀಸೆಲ್ ದರ ಅತ್ಯಂತ ಕನಿಷ್ಟ ಮಟ್ಟಕ್ಕೆ ಇಳಿದಿದೆ. ತೈಲ ದರವು ವರ್ಷದಲ್ಲಿ  ಅತ್ಯಂತ ಕಡಿಮೆಯಾಗಿ 70 ರು.ಗಿಂತಲೂ ಕೆಳಕ್ಕೆ ಇಳಿದಿದೆ. 

ನವದೆಹಲಿ: ತೈಲೋತ್ಪನ್ನಗಳ ದರ ಇಳಿಕೆ ಪರ್ವ ಮುಂದುವರೆದಿದ್ದು, ಭಾನುವಾರ ಪೆಟ್ರೋಲ್‌ ಬೆಲೆಯನ್ನು ಲೀ.ಗೆ 22 ಪೈಸೆ ಮತ್ತು ಡೀಸೆಲ್‌ ಬೆಲೆಯನ್ನು ಲೀಗೆ. 23 ಪೈಸೆಯಷ್ಟುಇಳಿಸಲಾಗಿದೆ.

ಹೀಗಾಗಿ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ ಲೀ.ಗೆ 69.04 ಮತ್ತು ಡೀಸೆಲ್‌ ಬೆಲೆ 63.09ಕ್ಕೆ ಇಳಿದಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ 69.60 ಮತ್ತು ಡೀಸೆಲ್‌ ದರ 63.43ಕ್ಕೆ ಇಳಿದಿದೆ. ಅ.18ರ ನಂತರ ಒಂದು ದಿನ ಹೊರತುಪಡಿಸಿದರೆ ಉಳಿದೆಲ್ಲಾ ದಿನಗಳೂ ದರ ಇಳಿಕೆ ಕಂಡಿವೆ.

ಇಷ್ಟುದಿನಗಳ ಅವಧಿಯಲ್ಲಿ ಪೆಟ್ರೋಲ್‌ ದರ 13.79 ರು. ಮತ್ತು ಡೀಸೆಲ್‌ ದರ 12.06 ರು.ನಷ್ಟುಇಳಿದಿದೆ. ಭಾನುವಾರ ದಾಖಲಾದ ದರಗಳು 2018ರಲ್ಲೇ ಅತ್ಯಂತ ಕನಿಷ್ಠ ದರವಾಗಿದೆ.