ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

First Published 7, Mar 2018, 8:08 AM IST
Petrol bomb Hurled at BJP office in Coimbatore
Highlights

ತಮಿಳುನಾಡು ಬಿಜೆಪಿ ಮುಖಂಡ ಹಚ್ಚಿದ ಬೆಂಕಿಗೆ ಪ್ರತೀಕಾರ ತೀರಿಸಿಕೊಳ್ಳಲಾಗಿದೆ. ತಮಿಳುನಾಡಿನ ವೆಲ್ಲೂರಿನಲ್ಲಿ ಪೆರಿಯಾರ್ ಮೂರ್ತಿಯನ್ನು ಧ್ವಂಸ ಮಾಡುತ್ತೇವೆ ಎಂದು ಬಿಜೆಪಿ ಮುಖಂಡ ಹೇಳಿದ್ದ ಬೆನ್ನಲ್ಲೇ ಪೆರಿಯಾರ್ ಮೂರ್ತಿಗೆ ಹಾನಿ ಉಂಟು ಮಾಡಲಾಗಿತ್ತು.

ಚೆನ್ನೈ : ತಮಿಳುನಾಡು ಬಿಜೆಪಿ ಮುಖಂಡ ಹಚ್ಚಿದ ಬೆಂಕಿಗೆ ಪ್ರತೀಕಾರ ತೀರಿಸಿಕೊಳ್ಳಲಾಗಿದೆ. ತಮಿಳುನಾಡಿನ ವೆಲ್ಲೂರಿನಲ್ಲಿ ಪೆರಿಯಾರ್ ಮೂರ್ತಿಯನ್ನು ಧ್ವಂಸ ಮಾಡುತ್ತೇವೆ ಎಂದು ಬಿಜೆಪಿ ಮುಖಂಡ ಹೇಳಿದ್ದ ಬೆನ್ನಲ್ಲೇ ಪೆರಿಯಾರ್ ಮೂರ್ತಿಗೆ ಹಾನಿ ಉಂಟು ಮಾಡಲಾಗಿತ್ತು.

ಇದಾದ ಬಳಿಕವೇ ಇಲ್ಲಿನ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡಲಾಗಿದೆ. ಪೆರಿಯಾರ್ ಮೂರ್ತಿಗೆ ಹಾನಿಯುಂಟು ಮಾಡಿರುವುದಕ್ಕೆ ಪ್ರತಿಕಾರವಾಗಿ ಈ ಕೃತ್ಯವನ್ನು ಎಸಗಲಾಗಿದೆ. ಕೊಯಂಬತ್ತೂರಿನಲ್ಲಿರುವ  ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡಲಾಗಿದೆ. ತಡರಾತ್ರಿ ಬಿಜೆಪಿ ಕಚೇರಿ ಮೇಲೆ ಎರಡು ಪೆಟ್ರೋಲ್ ಬಾಂಬ್ ಎಸೆಯಲಾಗಿದೆ.

loader