Asianet Suvarna News Asianet Suvarna News

ರಾಜ್ಯದ ಬಿಜೆಪಿ ಶಾಸಕನಿಗೆ ಸಂಕಷ್ಟ ತಂದಿತೆ ಸುಳ್ಳು ಪ್ರಮಾಣ ಪತ್ರ?

ಸುಳ್ಳು ಪ್ರಮಾಣ ಪತ್ರ ನೀಡಿದ ಶಾಸಕರು ಇದೀಗ ಅನರ್ಹತೆ ಭಯ ಎದುರಿಸುವಂತಾಗಿದೆ. ಹೈಕೋರ್ಟ್ ಏಕಸದಸ್ಯ ಪೀಠ ಸ್ಪಷ್ಟನೆ ಕೋರಿ ನೋಟಿಸ್ ಜಾರಿ ಮಾಡಿದೆ.

Petitions filed in High Court challenging election of 10 MLAs Including Jagaluru MLA

ಬೆಂಗಳೂರು[ಜು.25]  ಜಗಳೂರು ಬಿಜೆಪಿ ಶಾಸಕ ಎಸ್.ವಿ.ರಾಮಚಂದ್ರಗೆ ನೋಟಿಸ್ ನೀಡಲಾಗಿದೆ. ಎಸ್.ವಿ.ರಾಮಚಂದ್ರ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 11 ಅಭ್ಯರ್ಥಿಗಳಿಗೆ ನೋಟಿಸ್ ನೀಡಲಾಗಿದೆ.

ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಚುನಾವಣೆ ಸ್ಪರ್ಧೆ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಚ್.ವಿ ರಾಜೇಶ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಜಗಳೂರು ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡ ‌ಮೀಸಲು. ರಾಮಚಂದ್ರ ಹಿಂದುಳಿದ ವರ್ಗಕ್ಕೆ ಸೇರಿ‌ ಮರಾಠ ಸಮುದಾಯಕ್ಕೆ ಸೇರಿದ್ದಾರೆ. ಮರಾಠ ಸಮುದಾಯ ಹಿಂದುಳಿದ ವರ್ಗಕ್ಕೆ ಸೇರಿದೆ. ಹಾಗಾಗಿ ಎಸ್.ವಿ. ರಾಮಚಂದ್ರ ಶಾಸಕಕತ್ವ ಸ್ಥಾನವನ್ನು ರದ್ದುಗೊಳಿಸಬೇಕು. ಎರಡನೇ ಹೆಚ್ಚು ಮತ ಪಡೆದಿರುವ ಅಭ್ಯರ್ಥಿಯನ್ನು ಶಾಸಕ ಎಂದು ಘೋಷಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ಆ.20 ಕ್ಕೆ ಮುಂದೂಡಲಾಗಿದೆ.

Follow Us:
Download App:
  • android
  • ios