ಆದರೆ ಆತ ತಾನೂ ಮಾಜಿ ಸಚಿವ ಅಂಬರೀಶ್ ಸೋದರ, ಅಲ್ಲದೇ ಆರೋಗ್ಯಾಧಿಕಾರಿ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾನೆ. ಜೊತೆಗೆ ಅವಾಚ್ಯ ಶಬ್ದಗಳಿಂದ ಪೊಲೀಸರಿಗೆ ನಿಂದಿಸಿ ಪರಾರಿಯಾಗಿದ್ದಾನೆ.
ಬೆಂಗಳೂರು(ಜ.01): ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ತಾನು ಅಂಬರೀಷ್ ಸೋದರ ಎಂದು ಪೊಲೀಸರಿಗೇ ಅವಾಜ್ ಹಾಕಿ ಪರಾರಿಯಾದ ಘಟನೆ ಬೆಂಗಳೂರಲ್ಲಿ ನಡೆದಿದೆ.
ನಿನ್ನೆ ರಾತ್ರಿ ಕಬ್ಬನ್ ಪಾರ್ಕ್ ಬಳಿ ಪೊಲೀಸರು ಡ್ರೀಕ್ ಅಂಡ್ ಡ್ರೈವ್ ತಪಾಸಣೆಗಿಳಿದಿದ್ದರು. ಈ ವೇಳೆ ನ್ಯೂ ಇಯರ್ ಗುಂಗ್'ನಲ್ಲಿದ್ದ ವ್ಯಕ್ತಿಯೊಬ್ಬ ಕಂಠ ಪೂರ್ತಿ ಕುಡಿದಿದ್ದ. ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಾನೆ.
ಆದರೆ ಆತ ತಾನೂ ಮಾಜಿ ಸಚಿವ ಅಂಬರೀಶ್ ಸೋದರ, ಅಲ್ಲದೇ ಆರೋಗ್ಯಾಧಿಕಾರಿ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾನೆ. ಜೊತೆಗೆ ಅವಾಚ್ಯ ಶಬ್ದಗಳಿಂದ ಪೊಲೀಸರಿಗೆ ನಿಂದಿಸಿ ಪರಾರಿಯಾಗಿದ್ದಾನೆ.