ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ ಹಾಗೂ ಖ್ಯಾತ ಪತ್ರಕರ್ತ ದಿ.ಲಂಕೇಶ್ ಅವರ ಹಿರಿಯ ಪುತ್ರಿ ಗೌರಿ ಲಂಕೇಶ್ (೫೫) ಅವರನ್ನು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಭೀಕರವಾಗಿ ಹತ್ಯೆಗೈದಿದ್ದಾರೆ. ನಾಡಿನ ಹಿರಿಯ ಸಂಶೋಧಕ ಹಾಗೂ ವಿಚಾರವಾದಿ ಡಾ.ಎಂ.ಎಂ.ಕಲ್ಬುರ್ಗಿ ಅವರ ಹತ್ಯೆ ಮರೆಯುವ ಮುನ್ನವೇ ಆ ಕೃತ್ಯದ ಮಾದರಿಯಲ್ಲೇ ಮತ್ತೊಬ್ಬ ಹಿರಿಯ ವಿಚಾರವಾದಿಯ ಕೊಲೆ ನಡೆದಿರುವುದು ನಾಡಿನ ಸಾಹಿತ್ಯ ವಲಯದಲ್ಲಿ ದಿಗ್ಭ್ರಮೆ ಉಂಟುಮಾಡಿದೆ ಅಲ್ಲದೇ ಕರುನಾಡ ಜನರನ್ನು ಬೆಚ್ಚಿ ಬೀಳಿಸಿದೆ. ಆದರೆ ವ್ಯಕ್ತಿಯೊಬ್ಬ ಸಾಮಾಜಿಕ ಜಾಲಾತಾಣಗಳಲ್ಲಿ ಗೌರಿ ಲಂಕೇಶ್ ಹತ್ಯೆ ಕುರಿತಾಗಿ ಅಪಹಾಸ್ಯ ಮಾಡಿದ್ದಾನೆ.

ಬೆಂಗಳೂರು(ಸೆ.06): ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ ಹಾಗೂ ಖ್ಯಾತ ಪತ್ರಕರ್ತ ದಿ.ಲಂಕೇಶ್ ಅವರ ಹಿರಿಯ ಪುತ್ರಿ ಗೌರಿ ಲಂಕೇಶ್ (೫೫) ಅವರನ್ನು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಭೀಕರವಾಗಿ ಹತ್ಯೆಗೈದಿದ್ದಾರೆ. ನಾಡಿನ ಹಿರಿಯ ಸಂಶೋಧಕ ಹಾಗೂ ವಿಚಾರವಾದಿ ಡಾ.ಎಂ.ಎಂ.ಕಲ್ಬುರ್ಗಿ ಅವರ ಹತ್ಯೆ ಮರೆಯುವ ಮುನ್ನವೇ ಆ ಕೃತ್ಯದ ಮಾದರಿಯಲ್ಲೇ ಮತ್ತೊಬ್ಬ ಹಿರಿಯ ವಿಚಾರವಾದಿಯ ಕೊಲೆ ನಡೆದಿರುವುದು ನಾಡಿನ ಸಾಹಿತ್ಯ ವಲಯದಲ್ಲಿ ದಿಗ್ಭ್ರಮೆ ಉಂಟುಮಾಡಿದೆ ಅಲ್ಲದೇ ಕರುನಾಡ ಜನರನ್ನು ಬೆಚ್ಚಿ ಬೀಳಿಸಿದೆ. ಆದರೆ ವ್ಯಕ್ತಿಯೊಬ್ಬ ಸಾಮಾಜಿಕ ಜಾಲಾತಾಣಗಳಲ್ಲಿ ಗೌರಿ ಲಂಕೇಶ್ ಹತ್ಯೆ ಕುರಿತಾಗಿ ಅಪಹಾಸ್ಯ ಮಾಡಿದ್ದಾನೆ.

ಗೌರಿ ಲಂಕೇಶ್ ಹತ್ಯೆಗೆ ಇಡೀ ನಾಡೇ ಮರುಕಪಟ್ಟರೆ ಚಿಕ್ಕಮಗಳೂರು ಮೂಲದ ಮಲ್ಲಿ ಅರ್ಜುನ್​​​ ಎಂಬಾತ ಸಾಮಾಜಿಕ ಜಾಲಾತಾಣವಾದ ಫೇಸ್ಬುಕ್'ನಲ್ಲಿ ಈ ಸಾವನ್ನು ಅಪಹಾಸ್ಯ ಮಾಡಿದ್ದಾನೆ. ಇದಾದ ಬೆನ್ನಲ್ಲೇ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂಬ ವದಂತಿ ಹಬ್ಬಿತ್ತು, ಆದರೆ ಇದೀಗ ಅಪಹಾಸ್ಯ ಮಾಡಿದ್ದ ವ್ಯಕ್ತಿಯೇ ತನ್ನನ್ನು ಬಂಧಿಸಿಲ್ಲ ಎಂದು ಫೇಸ್ಬುಕ್'ನಲ್ಲಿ ಬರೆದುಕೊಂಡಿದ್ದಾನೆ ಅಲ್ಲದೇ ತಾನು ತಪ್ಪು ಮಾಡಿದ್ದೇನೆ ಎಂದು ಕ್ಷಮೆ ಕೇಳಿದ್ದಾನೆ.

ಸದ್ಯ ಪೊಲೀಸರು ಫೇಸ್​​ಬುಕ್​, ಟ್ವಿಟರ್​, ವಾಟ್ಸ್​​'ಆ್ಯಪ್​​​​ ಸಂದೇಶಗಳ ಮೇಲೆ ಪೊಲೀಸರ ಹದ್ದಿನಕಣ್ಣಿಟ್ಟಿದ್ದಾರೆ.