ಇಂಧನ ಸಚಿವ ಡಿ ಕೆ ಶಿವಕುಮಾರ್​​ ಹೆಸರು ದುರ್ಬಳಕೆ ಮಾಡಿಕೊಂಡು ನೂರಾರು ಜನರಿಗೆ ಪಂಗನಾಮ ಹಾಕಿದ್ದ ಅನ್ವರ್​ ಜಮಾದಾರ ಎಂಬಾತನ್ನ ಬೆಳಗಾವಿಯ ರಾಮದುರ್ಗ ಪೊಲೀಸರು ಬಂದಿಸಿದ್ದಾರೆ.

ಬೆಳಗಾವಿ(ಜೂ.17): ಇಂಧನ ಸಚಿವ ಡಿ ಕೆ ಶಿವಕುಮಾರ್​​ ಹೆಸರು ದುರ್ಬಳಕೆ ಮಾಡಿಕೊಂಡು ನೂರಾರು ಜನರಿಗೆ ಪಂಗನಾಮ ಹಾಕಿದ್ದ ಅನ್ವರ್​ ಜಮಾದಾರ ಎಂಬಾತನ್ನ ಬೆಳಗಾವಿಯ ರಾಮದುರ್ಗ ಪೊಲೀಸರು ಬಂದಿಸಿದ್ದಾರೆ.

ಬೆಳಗಾವಿ ಮೂಲದ ಈತ ಡಿ ಕೆ ಶಿವಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷನಾಗಿದ್ದ. ಡಿಕೆಶಿ ಜೊತೆ ಪೊಟೊ ತೆಗೆದುಕೊಂಡು ಹೆಸ್ಕಾಂ ನಲ್ಲಿ ನೌಕರಿ ಕೊಡಿಸುವುದಾಗಿ 30ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ನಾಪತ್ತೆಯಾಗಿದ್ದ. ಈ ಕುರಿತು ವಂಚನೆವಗೊಳಗಾದವರು, ಖುದ್ದು ಡಿ.ಕೆ.ಶಿವಕುಮಾರ್​​ಗೆ ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದರು. ಆಗ ಸಚಿವ ಡಿಕೆಶಿ ಪೊಲೀಸರಿಗೆ ದೂರು ನೀಡುವಂತೆ ತಿಳಿಸಿ ತಾವೂ ಖುದ್ದಾಗಿ ಪೊಲೀಸರಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರು.

ತಲೆ ಮರೆಸಿಕೊಂಡಿದ್ದ ವಂಚಕ ಅನ್ವರ್ ಜಮಾದರನನ್ನು ಪೊಲೀಸರು ಬಂದಿಸಿದ್ದಾರೆ. ಇನ್ನು ವಂಚಕನಿಗೆ ಯುವಕರು ಹಣ ನೀಡುತ್ತಿರುವ ವಿಡಿಯೋವನ್ನ ಚಿತ್ರಿಸಿಕೊಂಡಿದ್ದು, ತಾವು ಕೊಟ್ಟ ಹಣವನ್ನ ಮರಳಿ ಕೊಡಿಸುವಂತೆ ಪೊಲಿಸರಿಗೆ ದುಂದಾಲು ಬಿದ್ದಿದ್ದಾರೆ.