ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ, ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಟೂರ್ ಆಂಡ್ ಟ್ರಾವೆಲ್ಸ್ ಕಂಪನಿ ಕೋಟ್ಯಾಂತರ ರೂಪಾಯಿ ವಂಚಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ(ಆ.21): ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ, ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಟೂರ್ ಆಂಡ್ ಟ್ರಾವೆಲ್ಸ್ ಕಂಪನಿ ಕೋಟ್ಯಾಂತರ ರೂಪಾಯಿ ವಂಚಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹಳೇ ಹುಬ್ಬಳ್ಳಿ ಫತೇಶಾ ಅಲಿ ನಗರದ ಹಸ್ಮತ ಅಲಿ ಖಾದ್ರಿ ಎಂಬುವವರಿಗೆ ಸೇರಿದ ಹಬೀಬ್ ಹರ್ಮೈನ್ ಟೂರ್ಸ್ & ಟ್ರಾವೆಲ್ಸ್ ನಿಂದ ಈ ವಂಚನೆ ನಡೆದಿದೆ. ಸುಮಾರು 60 ಜನರಿಂದ ತಲಾ 2 ರಿಂದ 3 ಲಕ್ಷ ಹಣ ಸಂಗ್ರಹಿಸಿದ ಟ್ರಾವೆಲ್ಸ್ ಮಾಲೀಕ ಹಸ್ಮತ ಅಲಿ ಖಾದ್ರಿ ಹಣ ಪಡೆದು ಈಗ ಕಚೇರಿ ಬೀಗ ಜಡಿದು ಪರಾರಿಯಾಗಿದ್ದಾನೆ.
ಇನ್ನು ಈಗಾಗಲೇ ಪಾಸ್ ಪೋರ್ಟ್ ಹೊಂದಿದವರು ಈಗ ಹಜ್'ಗೆ ಪ್ರಯಾಣ ಬೆಳಸಬೇಕು ಅಂದ್ರು ಅವರ ಪಾಸ್ ಪೋರ್ಟ್ ಸಹ ತೆಗೆದುಕೊಂಡು ಪರಾರಿಯಾಗಿದ್ದಾನೆ. ಹಣ ಕಳೆದುಕೊಂಡು ಜನರು ಇಂದು ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ರು.
ವಂಚಕ ಹಸ್ಮತ ಅಲಿ ಖಾದ್ರಿಯನ್ನ ಬಂಧಿಸಿ ಹಣ ಮರಳಿ ಕೊಡಿಸುವಂತೆ ಒತ್ತಾಯಿಸಿದ್ರು.
