ಲೆನಿನ್ ಪ್ರತಿಮೆ ಧ್ವಂಸ ಬೆನ್ನಲ್ಲೇ ತಮಿಳ್ನಾಡಲ್ಲಿ ಪೆರಿಯಾರ್‌ ಪ್ರತಿಮೆಗೆ ಹಾನಿ

First Published 7, Mar 2018, 7:31 AM IST
Periyar statue Vandalised in Tamil Nadu
Highlights

ಲೆನಿನ್‌ ಪ್ರತಿಮೆ ಬಳಿಕ ಮುಂದಿನ ಸರದಿ ಪೆರಿಯಾರ್‌ ಅವರದ್ದು ಎಂಬ ಬಿಜೆಪಿ ನಾಯಕ ಎಚ್‌.ರಾಜಾ ಅವರ ಹೇಳಿಕೆ ಬೆನ್ನಲ್ಲೇ, ಮಂಗಳವಾರ ತಮಿಳುನಾಡಿನ ವೆಲ್ಲೂರಿನಲ್ಲಿ ದ್ರಾವಿಡ ಹೋರಾಟಗಾರ ಪೆರಿಯಾರ್‌ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.

ವೆಲ್ಲೂರು: ಲೆನಿನ್‌ ಪ್ರತಿಮೆ ಬಳಿಕ ಮುಂದಿನ ಸರದಿ ಪೆರಿಯಾರ್‌ ಅವರದ್ದು ಎಂಬ ಬಿಜೆಪಿ ನಾಯಕ ಎಚ್‌.ರಾಜಾ ಅವರ ಹೇಳಿಕೆ ಬೆನ್ನಲ್ಲೇ, ಮಂಗಳವಾರ ತಮಿಳುನಾಡಿನ ವೆಲ್ಲೂರಿನಲ್ಲಿ ದ್ರಾವಿಡ ಹೋರಾಟಗಾರ ಪೆರಿಯಾರ್‌ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.

ಈ ವೇಳೆ ಬಿಜೆಪಿ ಮತ್ತು ಸಿಪಿಐ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಕೆಲವರನ್ನು ಬಂಧಿಸಲಾಗಿದೆ. ತಮಿಳುನಾಡಿನಲ್ಲಿ ಭಾರೀ ಮನ್ನಣೆ ಹೊಂದಿರುವ ಪೆರಿಯಾರ್‌ ಅವರ ಪ್ರತಿಮೆಗೆ ಹಾನಿ ಮಾಡಿರುವ ಘಟನೆ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆ ಮಕ್ಕಳ್‌ ನೀಧಿ ಮಯ್ಯಂ ಪಕ್ಷದ ನಾಯಕ ಕಮಲ್‌ಹಾನಸ್‌ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

loader