ಸುವರ್ಣ ನ್ಯೂಸ್'ನ ಕವರ್ ಸ್ಟೋರಿಯಲ್ಲಿ ಖದೀಮರ ಕೃತ್ಯ ಬಯಲಾಗುತ್ತಿದಂತೆ ಬೆಳಗಾವಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ ಪೊಲೀಸ್ ಕಮಿಷನರ್ ಕೃಷ್ಣಭಟ್ , ಡಿಸಿಪಿ ಜಿ. ರಾಧಿಕಾ ನಿರ್ದೇಶನದಂತೆ ಸಿಸಿಐಬಿ ಇನ್ಸ್‌ಪೆಕ್ಟರ್ ಅಡಿವೇಶ್ ಬೂದಿಗೋಪ್ಪ ನೇತೃತ್ವದ ತಂಡ ದಾಳಿ ನಡೆಸಿ ಮೂರು ಆರೋಪಿಗಳನ್ನು ಬಂಧಿಸಿದೆ.
ಬೆಂಗಳೂರು(ಜ.21): ರಾಜ್ಯ ಸರ್ಕಾರದ ಕ್ಷೀರಭಾಗ್ಯಕ್ಕೆ ಕನ್ನ ಹಾಕಿ ನುಂಗಿ ನೀರು ಕುಡಿಯುತ್ತಿದ್ದ ಭ್ರಷ್ಟರು ಇದೀಗ ಕಂಬಿ ಎಣಿಸುತ್ತಿದ್ದಾರೆ.
ಸುವರ್ಣ ನ್ಯೂಸ್'ನ ಕವರ್ ಸ್ಟೋರಿಯಲ್ಲಿ ಖದೀಮರ ಕೃತ್ಯ ಬಯಲಾಗುತ್ತಿದಂತೆ ಬೆಳಗಾವಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ ಪೊಲೀಸ್ ಕಮಿಷನರ್ ಕೃಷ್ಣಭಟ್ , ಡಿಸಿಪಿ ಜಿ. ರಾಧಿಕಾ ನಿರ್ದೇಶನದಂತೆ ಸಿಸಿಐಬಿ ಇನ್ಸ್ಪೆಕ್ಟರ್ ಅಡಿವೇಶ್ ಬೂದಿಗೋಪ್ಪ ನೇತೃತ್ವದ ತಂಡ ದಾಳಿ ನಡೆಸಿ ಮೂರು ಆರೋಪಿಗಳನ್ನು ಬಂಧಿಸಿದೆ.
ಹೀರೆಬಾಗೆವಾಡಿ ಗ್ರಾಮದ ಪ್ರಮುಖ ಆರೋಪಿಗಳಾದ ಬಸು ವಾಲಿ , ನಾಗರಾಜ್ ವಾಲಿ ಹಾಗೂ ದಂಧೆಯ ಕಿಂಗ್ ಪಿನ್ ಸಂಜು ಹಡಿಗಿನಾಳರನ್ನು ಬಂಧಿಸಲಾಗಿದೆ.
