ಅಕ್ರಮ ಗಣಿಗಾರಿಕೆ ಕುರಿತು ವರದಿ ನೀಡಿ 6 ವರ್ಷಗಳಾದರೂ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಂಡಿರಲಿಲ್ಲ. ಈಗ ಮುಂದಿನ ವಿಧಾನಸಭಾ ಎಲೆಕ್ಷನ್'ಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ಸರ್ಕಾರ ಇದ್ದಕ್ಕಿದ್ದಂತೆ ಮೈ ಕೊಡವಿ ಎದ್ದು ನಿಂತಿದೆ.
ಬೆಂಗಳೂರು(ಎ.20): ಅಕ್ರಮ ಗಣಿಗಾರಿಕೆ ಕುರಿತು ವರದಿ ನೀಡಿ 6 ವರ್ಷಗಳಾದರೂ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಂಡಿರಲಿಲ್ಲ. ಈಗ ಮುಂದಿನ ವಿಧಾನಸಭಾ ಎಲೆಕ್ಷನ್'ಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ಸರ್ಕಾರ ಇದ್ದಕ್ಕಿದ್ದಂತೆ ಮೈ ಕೊಡವಿ ಎದ್ದು ನಿಂತಿದೆ.
ಗಣಿ ಕಳ್ಳರ ವಲಯದಲ್ಲಿ ಶುರುವಾಗಿದೆ ಕಂಪನ
ಗಣಿ ಕಳ್ಳರಿಗೆ ಚುರುಕು ಮುಟ್ಟಿಸಲು ಸರ್ಕಾರ ಮುಂದಾಗಿದೆ. ಲೋಕಾಯುಕ್ತ ಸಂತೋಷ್ ಹೆಗ್ಡೆ ಕೊಟ್ಟ ವರದಿ ಆಧರಿಸಿ ಕ್ರಮ ಕೈಗೊಳ್ಳಲು ಸಚಿವ ಎಚ್.ಕೆ.ಪಾಟೀಲ್ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ನಿರಂತರ ಸಭೆ ನಡೆಸುತ್ತಿದೆ.
ಇದು ಗಣಿ ಕಳ್ಳರ ವಲಯದಲ್ಲಿ ನಡುಕ ಹುಟ್ಟಿಸಿದೆ.
ಸೂಕ್ತ ದಾಖಲೆಗಳಿದ್ದು, ಚಾರ್ಜ್ ಶೀಟ್ ಸಲ್ಲಿಕೆಯಾದರೂ ಅಧಿಕಾರಿಗಳೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಚಾರ್ಜ್ಶೀಟ್ನಲ್ಲಿ ದಾಖಲಾಗಿರುವ ಎಲ್ಲಾ ಆರೋಪಿಗಳಿಂದ ಆಸ್ತಿ ಜಫ್ತಿ ಮಾಡಲು ಎಚ್.ಕೆ.ಪಾಟೀಲ್ ಕಾನೂನು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ ಲೋಕಾಯುಕ್ತ ವರದಿಯಲ್ಲಿ ವಿಶೇಷವಾಗಿ ನಮೂದಿಸಿರುವ ವ್ಯಕ್ತಿಗಳ ಆಸ್ತಿಗಳನ್ನು ಜಫ್ತಿ ಮಾಡಲು ಸರ್ಕಾರ ಮುಂದಾಗಿದೆ.
ಇನ್ನೂ ಜೆ.ಎಸ್.ಡಬ್ಲ್ಯೂನಿಂದ ಮೈಸೂರ್ ಮಿನರಲ್ಸ್ಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿತ್ತು. ಹೀಗಾಗಿ ನಷ್ಟ ವಸೂಲಿ ಮಾಡುವ ಜವಾಬ್ದಾರಿಯೂ ಎಂ.ಎಂ.ಎಲ್.ಮೇಲಿತ್ತು. ಈಗ ಜೆ.ಎಸ್.ಡಬ್ಲ್ಯೂನಿಂದ ಬಾಕಿ ವಸೂಲು ಮಾಡಲು ಸಿವಿಲ್ ಸೂಟ್ ಕೂಡ ಹಾಕಿದೆ.
ಒಟ್ಟಿನಲ್ಲಿ ಈಗಲಾದರೂ ಸರ್ಕಾರ ಗಣಿ ಕಳ್ಳರಿಗೆ ಬಿಸಿ ಮುಟ್ಟಿಸಲು ಮುಂದಾಗಿರೋದು ಶ್ಲಾಘನೀಯ. ಆದಷ್ಟು ಬೇಗ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿದೆ.
ವರದಿ: ಜಿ.ಮಹಾಂತೇಶ್, ಸುವರ್ಣನ್ಯೂಸ್
