ವಸಂತನಗರದಲ್ಲಿ ರಾತ್ರೋ ರಾತ್ರಿ ಬಿಬಿಎಂಪಿಯಿಂದ ದೇವಸ್ಥಾನ ಮತ್ತು ಚರ್ಚ್ ಧ್ವಂಸಮಾಡಿರುವುದನ್ನು ಖಂಡಿಸಿ ಅಲ್ಲಿನ ಸ್ಥಳೀಯರು ನಿನ್ನೆ ಅಹೋರಾತ್ರಿ ಧರಣಿ ನಡೆಸಿದರು.

ಬೆಂಗಳೂರು(ಮೇ.14): ವಸಂತನಗರದಲ್ಲಿ ರಾತ್ರೋ ರಾತ್ರಿ ಬಿಬಿಎಂಪಿಯಿಂದ ದೇವಸ್ಥಾನ ಮತ್ತು ಚರ್ಚ್ ಧ್ವಂಸಮಾಡಿರುವುದನ್ನು ಖಂಡಿಸಿ ಅಲ್ಲಿನ ಸ್ಥಳೀಯರು ನಿನ್ನೆ ಅಹೋರಾತ್ರಿ ಧರಣಿ ನಡೆಸಿದರು.

ರಾತ್ರಿ ಇಡೀ ದೇವಸ್ಥಾನ ಧ್ವಂಸಗೊಳಿಸಿದ ಸ್ಥಳದಲ್ಲೇ ಧರಣಿ ನಡೆಸಿದರು. ಈ ವೇಳೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ನಮ್ಮ ಹೋರಾಟ ಮುಂದುವರಿಯುತ್ತದೆ. ಕಳೆದ 30 ವರ್ಷದಿಂದ ಈ ದೇವಸ್ಥಾನ ಇತ್ತು. ಆದರೆ ನಿನ್ನೆ ಏಕಾಏಕಿ ಬಿಬಿಎಂಪಿ ಅಧಿಕಾರಿಗಳು ದೇವಸ್ಥಾನವನ್ನು ಕೆಡವಿದ್ದಾರೆ. ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಸೋಮವಾರ ಬಿಬಿಎಂಪಿ ಕಚೇರಿಗೂ ಸಹ ಮುತ್ತಿಗೆ ಹಾಕುತ್ತೇವೆ. ಅದಕ್ಕೂ ಜಗ್ಗದೇ ಹೋದರೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ