ಕಾವೇರಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಂಡ್ಯ ಜಿಲ್ಲೆಯ ಕಾವೇರಿ ಹೋರಾಟಗಾರಿಗೆ ಈಗ ಹೊಸ ಸಂಕಷ್ಟ ಶುರುವಾಗಿದೆ. ಹೋರಾಟದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪೊಲೀಸರು ಅನೇಕ ಪ್ರಕರಣಗಳನ್ನ ದಾಖಲಿಸಿದ್ದು, ಜಾಮೀನು ಪಡೆಯಲು ರೈತರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಮಂಡ್ಯ(ಅ.09): ಕಾವೇರಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಂಡ್ಯ ಜಿಲ್ಲೆಯ ಕಾವೇರಿ ಹೋರಾಟಗಾರಿಗೆ ಈಗ ಹೊಸ ಸಂಕಷ್ಟ ಶುರುವಾಗಿದೆ. ಹೋರಾಟದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪೊಲೀಸರು ಅನೇಕ ಪ್ರಕರಣಗಳನ್ನ ದಾಖಲಿಸಿದ್ದು, ಜಾಮೀನು ಪಡೆಯಲು ರೈತರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ತಮ್ಮ ಸಾಲವಿಲ್ಲದ ಜಮೀನಿನ ಆರ್.ಟಿ.ಸಿ ಸಲ್ಲಿಸಬೇಕು. ಆದರೆ, ಜಿಲ್ಲೆಯ ಬಹುತೇಕ ರೈತ್ರು ಒಂದಲ್ಲ ಒಂದು ಬ್ಯಾಂಕ್ ನಲ್ಲಿ ಜಮೀನಿನ ಮೇಲೆ ಸಾಲ ಪಡೆದಿದ್ದಾರೆ. ಇನ್ನು ಸಾಲ ಪಡೆಯದವರ ಜಮೀನಿನ RTC ಬೇಕಾದ್ರೆ ಹೋರಾಟಗಾರರೇ ಜಮೀನಿನ ಬಾಕಿ ಕಂದಾಯ, ಮನೆಯ ಕಂದಾಯ ಕಟ್ಟಿ RTC ಪಡೆಯಬೇಕಾಗಿದೆ.
ಕಾವೇರಿ ಹೋರಾಗಾರಿಗೆ ಇಷ್ಟೆಲ್ಲ ಕಷ್ಟವಾಗುತ್ತಿದ್ದರೂ ಕಾವೇರಿ ಹೋರಾಟ ಹಿತರಕ್ಷಣಾ ಸಮಿತಿ ನೆರವಿಗೆ ಬರ್ತಿಲ್ಲ ಅಂತಾ ಕಾವೇರಿ ಹೋರಾಟಗಾರ ಇಂಡವಾಳು ಬಸವರಾಜು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಅಲ್ದೆ ಕಾವೇರಿ ಹಿತರಕ್ಷಣಾ ವೇದಿಕೆಯವರು ಹೋರಾಟಕ್ಕೆ ಬಂದ ಹಣವನ್ನ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಜಿ. ಮಾದೇಗೌಡ್ರು ಮಗನಿಗೆ ಮಿಮ್ಸ್ ಆಸ್ಪತ್ರೆಯ ನಿರ್ದೇಶಕನನ್ನಾಗಿ ಮಾಡಿ ತೆಪ್ಪಗಿದ್ದಾರೆ ಅಂತ ಆರೋಪ ಮಾಡಿದ್ದಾರೆ.
