ರಾಮ್​ ರಹೀಂ ಬಾಬಾಗೆ ಈಗ 20 ವರ್ಷ ಶಿಕ್ಷೆಯಾಗಿದೆ. ನ್ಯಾಯಾಂಗದ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ. ಇದರ ಬೆನ್ನಲ್ಲೇ ಇನ್ನೊಂದಿಷ್ಟು ಬಾಬಾಗಳ ವಿರುದ್ಧವೂ ವಾರ್ ಶುರುವಾಗಿದೆ. ನಿತ್ಯಾನಂದ ವಿರುದ್ಧವೂ ಈಗ ವಾರ್ ಶುರುವಾಗಿದೆ. ಅದೇನು ಅಂತಾ ನೀವೇ ನೋಡಿ..

ಬೆಂಗಳೂರು(ಆ.29): ಅತ್ಯಾಚಾರಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್ ರಹೀಮ್ ಸಿಂಗ್​ಗೆ ಹರಿಯಾಣದ ಸಿಬಿಐ ಕೋರ್ಟ್​ ಬರೋಬ್ಬರಿ 20 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಮಾಡಿದ ತಪ್ಪಿಗೆ ಇದೀಗ ರೋಹ್ಟಕ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಇದರ ಬೆನ್ನಲ್ಲೇ ಈಗ ಬಿಡದಿ ನಿತ್ಯಾನಂದನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಫೇಸ್​'ಬುಕ್​ ಲೈವ್'​ನಲ್ಲಿ ಸೇಲಂ ಮೂಲದ ವ್ಯಕ್ತಿ ಪಿಯೂಷ್ ಮನುಷ್​ ಎಂಬಾತ ನಿತ್ಯಾನಂದ ವಿರುದ್ಧ ಹೇಳಿಕೆ ಪೋಸ್ಟ್​ ಮಾಡಿದ್ದಾರೆ.

ಪಿಯೂಷ್ ಮನುಷ್

ಅತ್ಯಾಚಾರ ಪ್ರಕರಣದಲ್ಲಿ ಗುರ್ಮಿತ್ ರಾಮ್ ರಹೀಂಗೆ ಶಿಕ್ಷೆ ಯಾಗುತ್ತಿದಂತೆ ಇದೀಗ ಅತ್ಯಾಚಾರದ ಆರೋಪ ಎದುರಿಸುತ್ತಿರುವ ನಿತ್ಯಾನಂದ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಬಾಬಾನನ್ನು ಜೈಲಿಗಟ್ಟಲು 15 ವರ್ಷ ಬೇಕಾಯ್ತು. ಆದ್ರೆ ತಮಿಳುನಾಡು ಮೂಲದ ನಿತ್ಯಾನಂದನನ್ನು ಜೈಲಿಗಟ್ಟಲು ಇನ್ನೆಷ್ಟು ದಿನಗಳು ಬೇಕು..?

ಹೀಗಂತಾ ಹಲವು ಬಾಬಾಗಳ ಫೋಟೋ ಹಾಕಿ ಪಿಯೂಷ್ ಪ್ರಶ್ನಿಸಿದ್ದಾನೆ. ಇದಕ್ಕೆ ನಿತ್ಯಾನಂದನ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಶುಪತಿ ಕೆ

ಹಾಯ್.. ಪಿಯೂಷ್ ಮನುಷ್ ನೀವು ತಪ್ಪು ಹೇಳ್ತಿದ್ದೀರಾ. ನಿತ್ಯಾನಂದ ಯಾರನ್ನೂ ಅತ್ಯಾಚಾರ ಮಾಡಿಲ್ಲ.

ಮೆಹಬೂಬ್ ಜಾನ್

ನಿತ್ಯಾನಂದ ಒಳ್ಳೆಯವರು. ಇವರು ಬೇರೆ ಧರ್ಮಗಳಿಗೆ ತೊಂದರೆ ಕೊಟ್ಟಿಲ್ಲ. ಆದ್ರೆ ಮಾಧ್ಯಮಗಳು ಜನರಿಗೆ ನಿತ್ಯಾನಂದರ ಬಗ್ಗೆ ತಪ್ಪು ಮಾಹಿತಿ ನೀಡುತ್ತಿವೆ. 

ಹೀಗೆ ಕಾಮೆಂಟ್ ಮಾಡುವ ಮೂಲಕ ನಮ್ಮ ಗುರುಗೆ ತೇಜೋವಧೆ ಮಾಡಲು ಮಾಡುತ್ತಿರುವ ಹುನ್ನಾರವಿದು ಅಂತಾ ನಿತ್ಯಾನಂದ ಭಕ್ತರು ಕಿಡಿ ಕಾರಿದ್ದಾರೆ. ಒಟ್ಟಿನಲ್ಲಿ ರಾಮ್ ರಹೀಂ ಶಿಕ್ಷೆ ಬೆನ್ನಲ್ಲೇ ಈಗ ನಿತ್ಯಾನಂದನ ವಿರುದ್ಧವೂ ಫೇಸ್​ಬುಕ್ ವಾರ್ ಶುರುವಾಗಿದ್ದು, ಕುತೂಹಲ ಕೆರಳಿಸಿದೆ.