ದೇವೋರಿಯಾ(ಸೆ. 06): ರಾಹುಲ್ ಗಾಂಧಿ ಭಾಷಣ ಕೇಳಲು ಬಂದ ಜನರು ಸ್ಥಳದಲ್ಲಿದ್ದ ನೂರಾರು ಮಂಚಗಳನ್ನ ಮನೆಗೆ ಎತ್ತಿ ಒಯ್ದ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ವಿನೂತನ ರೀತಿಯಲ್ಲಿ ನಡೆಸಲಾಗುತ್ತಿರುವ ರೈತರ ಸಭೆಯಲ್ಲಿ ಇಡಲಾಗಿದ್ದ 2 ಸಾವಿರ ಮಂಚಗಳ ಪೈಕಿ ಉಳಿದುಕೊಂಡಿದ್ದು ಹತ್ತಾರು ಮಾತ್ರ.
ಏನಿದು ರೈತರ ಸಭೆ?
ಖಾಟ್ ಸಭಾ(ರೈತರ ಸಭೆ)ದಲ್ಲಿ ಮಂಚಗಳ ಮೇಲೆ ಕುಳಿತು ರೈತರು ಪ್ರಮುಖ ವಿಷಯಗಳನ್ನು ಚರ್ಚಿಸುತ್ತಾರೆ. ಮೋದಿಯವರ ಚಾಯ್ ಪೇ ಚರ್ಚಾ ಕಾರ್ಯಕ್ರಮಕ್ಕೆ ಸೆಡ್ಡು ಹೊಡೆಯಲು ರಾಹುಲ್ ಗಾಂಧಿ ಅನುಸರಿಸುತ್ತಿರುವ ಹೊಸ ತಂತ್ರ ಇದಾಗಿದೆ. ಆದರೆ, ಗಂಭೀರ ವಿಷಯದ ಚರ್ಚೆಗೆ ಬಂದ ಜನರು ಹೊಚ್ಚಹೊಸ ಮಂಚಗಳನ್ನ ಮನೆಗೆ ಹೊತ್ತೊಯ್ದಿದ್ದಾರೆ. ಭಾರೀ ಭಾರದ ಕಬ್ಬಿಣದ ಮಂಚಗಳಷ್ಟೇ ಉಳಿದುಕೊಂಡಿದ್ದು.
