ಪಿಂಚಣಿ ವ್ಯಕ್ತಿಯ ಹಕ್ಕು, ಅದು ಸಬ್ಸಿಡಿ ಅಲ್ಲ. ಹೀಗಾಗಿ ಅದನ್ನು ಹೇಗೆ ನೀವು ಆಧಾರ್‌ಗೆ ಜೋಡಿಸುತ್ತೀರಿ? ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ನವದೆಹಲಿ: ಪಿಂಚಣಿ ವ್ಯಕ್ತಿಯ ಹಕ್ಕು, ಅದು ಸಬ್ಸಿಡಿ ಅಲ್ಲ. ಹೀಗಾಗಿ ಅದನ್ನು ಹೇಗೆ ನೀವು ಆಧಾರ್‌ಗೆ ಜೋಡಿಸುತ್ತೀರಿ? ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ವರ್ಷಗಳ ವರೆಗೆ ಸರ್ಕಾರಿ ಸೇವೆ ಸಲ್ಲಿಸಿದುದಕ್ಕಾಗಿ ನಿವೃತ್ತ ವ್ಯಕ್ತಿ ಪಿಂಚಣಿ ಪಡೆಯಲು ಅರ್ಹನಾಗುತ್ತಾನೆ. ಕೇವಲ ಆಧಾರ್‌ ಇಲ್ಲ ಎಂಬ ಕಾರಣಕ್ಕೆ ಇಂತಹ ಹಕ್ಕುಬದ್ಧ ಸವಲತ್ತನ್ನು ನೀಡಲು ಕೇಂದ್ರ ನಿರಾಕರಿಸುತ್ತದೆಯೇ? ಎಂದು ಐವರು ಸದಸ್ಯರ ನ್ಯಾಯಪೀಠ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ರನ್ನು ಪ್ರಶ್ನಿಸಿತು.

ನಕಲಿ ಪಿಂಚಣಿಗಾರರು ನಿವೃತ್ತಿ ನಂತರದ ಸವಲತ್ತುಗಳನ್ನು ಪಡೆಯುವುದನ್ನು ತಡೆಯಲು ಆಧಾರ್‌ ಪ್ರಬಲ ಅಸ್ತ್ರವಾಗಿದೆ ಎಂದು ವೇಣುಗೋಪಾಲ್‌ ತಿಳಿಸಿದಾಗ, ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.