ರಾಷ್ಟ್ರೀಯವಾಗಿ ಸರಾಸರಿ ಗಮನಿಸುವುದಿದ್ದರೆ ಪ್ರತಿಯೊಬ್ಬ ಜಡ್ಜ್ ಮೇಲೆ 650 ಕೇಸುಗಳು ವಿಚಾರಣೆಗಾಗಿ ಬಾಕಿ ಉಳಿದಿವೆ

ಚೆನ್ನೈ(ಅ.15): ದೇಶದ ನ್ಯಾಯಾಂಗ ವ್ಯವಸ್ಥೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಶ್ಲಾಘಿಸಿದ್ದಾರೆ. ಆದರೂ ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ವಿಲೇವಾರಿ ಮಾಡಲು ವಿವಿಧ ನ್ಯಾಯಾಲಯಗಳಲ್ಲಿ ಜಡ್ಜ್‌ಗಳನ್ನು ಶೀಘ್ರದಲ್ಲಿಯೇ ನೇಮಕ ಮಾಡಿಕೊಳ್ಳಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ರಾಷ್ಟ್ರೀಯವಾಗಿ ಸರಾಸರಿ ಗಮನಿಸುವುದಿದ್ದರೆ ಪ್ರತಿಯೊಬ್ಬ ಜಡ್ಜ್ ಮೇಲೆ 650 ಕೇಸುಗಳು ವಿಚಾರಣೆಗಾಗಿ ಬಾಕಿ ಉಳಿದಿವೆ ಎಂದು ಅವರು ಹೇಳಿದ್ದಾರೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿನ ಜಡ್ಜ್‌ಗಳ ಕಾರ್ಯನಿರ್ವಹಣೆ ಶ್ಲಾಘನೀಯವೇ ಆಗಿದೆ ಎಂದು ಅವರು ನ್ಯಾ.ಠಾಕೂರ್ ಹೇಳಿದ್ದಾರೆ.

ದೇಶದಲ್ಲಿನ ಕೋರ್ಟ್‌ಗಳಲ್ಲಿ ಖಟ್ಲೆಗಳ ಸಂಖ್ಯೆ ಹೆಚ್ಚಾಗಲು ವಿವಿಧ ಹಂತದಲ್ಲಿ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರ ಕೊರತೆ ಒಂದೇ ಕಾರಣವಲ್ಲ ಎಂದು ಕೇಂದ್ರ ಕಾನೂನು ಸಚಿವಾಲಯ ನೀಡಿದ ಹೇಳಿಕೆ ಬೆನ್ನಲ್ಲೇ ಮುಖ್ಯ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿರುವುದು ಗಮನಾರ್ಹ.