ಕೃಷ್ಣ ಮಠದ ಪರ್ಯಾಯ ಪೀಠದಲ್ಲಿರುವ ಶ್ರೀಗಳು 2 ವರ್ಷಗಳ ಕಾಲ ಕೃಷ್ಣನ ರಥಬೀದಿ ಬಿಟ್ಟು ಹೊರಗೆ ಹೋಗುವಂತಿಲ್ಲ ಎನ್ನುವುದು ಉಡುಪಿ ಮಠದ ಅಲಿಖಿತ ನಿಯಮ.
ಉಡುಪಿ: ಕೃಷ್ಣ ಮಠದ ಪರ್ಯಾಯ ಪೀಠದಲ್ಲಿರುವ ಶ್ರೀಗಳು 2 ವರ್ಷಗಳ ಕಾಲ ಕೃಷ್ಣನ ರಥಬೀದಿ ಬಿಟ್ಟು ಹೊರಗೆ ಹೋಗುವಂತಿಲ್ಲ ಎನ್ನುವುದು ಉಡುಪಿ ಮಠದ ಅಲಿಖಿತ ನಿಯಮ.
ಆದರೆ, ಶುಕ್ರವಾರ ಪೇಜಾವರ ಶ್ರೀಗಳು ರಥಬೀದಿಯಿಂದ ಹೊರಗಿರುವ ರಾಯಲ್ ಗಾರ್ಡನ್‌ಗೆ ತೆರಳಿ ಧರ್ಮ ಸಂಸದ್‌ನ ಚಪ್ಪರ ಪೂಜೆಯಲ್ಲಿ ಭಾಗವಹಿಸಿದ್ದಾರೆ.
ಇದು ಈಗ ಮಠದ ಭಕ್ತರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶುಕ್ರವಾರ ಶ್ರೀಗಳು ಏಕಾಏಕಿ ಧರ್ಮ ಸಂಸದ್ ಕಾರ್ಯಕ್ರಮಗಳಿಗಾಗಿ ರಥಬೀದಿಯಿಂದ ಹೊರಗಿರುವ ರಾಯನ್ ಗಾರ್ಡನ್‌ಗೆ ತೆರಳಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಶ್ರೀಗಳು ಹರ್ನಿಯಾ ಶಸ್ತ್ರಚಿಕಿತ್ಸೆಗಾಗಿ 2 ಬಾರಿ ಮಠ ಬಿಟ್ಟು ನಾಲ್ಕೆದು ಮೈಲಿ ದೂರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗಾಗಿ, ಮಠದ ಅನತಿ ದೂರದಲ್ಲಿರುವ ರಾಯಲ್ ಗಾರ್ಡನ್‌ಗೆ ಹೋಗಿದ್ದರಲ್ಲಿ ತಪ್ಪಿಲ್ಲ ಎನ್ನುವ ವಾದವನ್ನೂ ಕೆಲವು ಭಕ್ತರು ವ್ಯಕ್ತಪಡಿಸಿದ್ದಾರೆ.
