ಶ್ರೀನಗರ (ಜ.11): ಕಾಶ್ಮೀರದಲ್ಲಿ  ಭದ್ರತಾ ಸಿಬ್ಬಂದಿ ನಡೆಸಿದ ಎನ್'ಕೌಂಟರ್'ನಲ್ಲಿ ಮೃತಪಟ್ಟ ಉಗ್ರಗಾಮಿಗಳು ಹುತಾತ್ಮರು ಎಂದು ಪಿಡಿಪಿ ಶಾಸಕ ಆಯ್ಜಜ್ ಆಹ್ಮದ್ ಮಿರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

ಉಗ್ರಗಾಮಿಗಳ ಸಾವನ್ನು ನಾವು ಸಂಭ್ರಮಿಸಬಾರದು. ಎನ್'ಕೌಂಟರ್'ನಲ್ಲಿ ಉಗ್ರಗಾಮಿಗಳ ಜೊತೆ ನಮ್ಮ ಭದ್ರತಾ ದಳದ ಪೊಲೀಸರು ಮೃತಪಟ್ಟಿದ್ದಾರೆ. ಅವರೆಲ್ಲಾ ಹುತಾತ್ಮರಾಗಿದ್ದಾರೆ.  ಇವರ ಬಗ್ಗೆ, ಇವರ ಪೋಷಕರ ಬಗ್ಗೆ ನಮಗೆ ಅನುಕಂಪ ಇರಬೇಕು. ಉಗ್ರಗಾಮಿಗಳ ಸಾವನ್ನು ಸಂಭ್ರಮಿಸಿದರೆ ನಮ್ಮ ಭದ್ರತಾ ಸಿಬ್ಬಂದಿಯ ಸಾವನ್ನು ಸಂಭ್ರಮಿಸಿದಂತಾಗುತ್ತದೆ ಎಂದು ಆಯ್ಜಜ್ ಆಹ್ಮದ್ ಹೇಳಿದ್ದಾರೆ.

ಕಾಶ್ಮೀರದಲ್ಲಿ ಉಗ್ರಗಾಮಿಗಳು ಮೃತಪಟ್ಟಿದ್ದಕ್ಕೆ ಆಯ್ಜಜ್  ಸಂತಸ ವ್ಯಕ್ತಪಡಿಸಿಲ್ಲ. ಮೃತಪಟ್ಟವರನ್ನು ತಮ್ಮ ಸಹೋದರರು ಎಂದು ಆಯ್ಜಿಜ್ ಭಾವಿಸಿದಂತಿದೆ ಎಂದು ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಶಾಸಕರು ಹೇಳಿರುವ ಹಿನ್ನಲೆಯಲ್ಲಿ ಇಂದು ಅವರು ಸ್ಪಷ್ಟನೆ ನೀಡಿದ್ದಾರೆ.