ನವದೆಹಲಿ (ಫೆ.04): ಪೇಟಿಎಂ ಹಾಗೂ ರಿಲಯನ್ಸ್ ಜಿಯೋ ಕಂಪನಿಗಳು ತಮ್ಮ ಜಾಹಿರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಫೊಟೋವನ್ನು ಬಳಸಿಕೊಂಡಿರುವುದಕ್ಕೆ ಸರ್ಕಾರವು ನೋಟಿಸ್ ಕಳುಹಿಸಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ನವದೆಹಲಿ (ಫೆ.04): ಪೇಟಿಎಂ ಹಾಗೂ ರಿಲಯನ್ಸ್ ಜಿಯೋ ಕಂಪನಿಗಳು ತಮ್ಮ ಜಾಹಿರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಫೊಟೋವನ್ನು ಬಳಸಿಕೊಂಡಿರುವುದಕ್ಕೆ ಸರ್ಕಾರವು ನೋಟಿಸ್ ಕಳುಹಿಸಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ತಮ್ಮ ಜಾಹಿರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಬಳಸಿಕೊಳ್ಳುವು ಮುನ್ನ ಅನುಮತಿ ಪಡೆದಿದ್ದೀರಾ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಜಿಯೋ ಹಾಗೂ ಪೇಟಿಎಂ ಸಂಸ್ಥೆಗೆ ಕೇಳಿದೆ.

ಲಾಂಛನ ಮತ್ತು ಹೆಸರು ಕಾಯ್ದೆಯಡಿ ಯಾವುದೇ ವ್ಯಕ್ತಿ ಅಥವಾ ಚಿಹ್ನೆಯನ್ನು ಕಮರ್ಷಿಯಲ್ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಮುನ್ನ ಸಂಬಂಧಪಟ್ಟವರಿಂದ ಅನುಮತಿ ತೆಗೆದುಕೊಳ್ಳಬೇಕೆಂದು ಗ್ರಾಹಕ ವ್ಯವಹಾರ ಇಲಾಖೆ ಮಾಹಿತಿ ಮತ್ತು ಪ್ರಸಾರ ಖಾತೆಗೆ ಈಗಾಗಲೇ ಸೂಚಿಸಿದೆ.