ಮುಂಬೈ[ಆ. 06]  ನನ್ನ ಟ್ವಿಟರ್ ಅಕೌಂಟ್​ ಅನ್ನ ಮುಂಬೈ ಪೊಲೀಸರು ಬ್ಲಾಕ್​ ಮಾಡಿದ್ದಾರೆ.'ನಾನು ಹಿಂದೂ ನಟಿ. ಆದ್ರೆ ಪೊಲೀಸರ ನಡೆಯಿಂದ ನನಗೆ ಹಿಂದೂಸ್ಥಾನದಲ್ಲಿ ವಾಸಿಸಲು ಭಯವಾಗುತ್ತಿದೆ. ನನ್ನ ಕುಟುಂಬಸ್ಥರು ನನಗೆ ಹಿಂದೂ ಧರ್ಮದ ಪರವಾಗಿ ಮಾತನಾಡಬೇಡ ಅಂತಾ ಯಾಕೆ ಹೇಳುತ್ತಿದ್ದರು ಎಂಬುದು ಈಗ ಅರ್ಧವಾಗುತ್ತಿದೆ'   ಎಂದೆಲ್ಲ ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದ ನಟಿ  ಪಾಯಲ್​ ರೋಹ್ಟಗಿ ಇದೀಗ ಮೋದಿ-ಶಾ ಜೋಡಿಯ ಐತಿಹಾಸಿಕ ತೀರ್ಮಾನ ಕೊಂಡಾಡಿದ್ದಾರೆ.

ಆರ್ಟಿಕಲ್ 370ನ್ನು ತೆಗೆದು ಹಾಕಿರುವುದಕ್ಕೆ ಧನ್ಯವಾದ ಸಲ್ಲಿಸಿರುವ ನಟಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್‌ಗೆ ನೀಡಿರುವ ತಿರುಗೇಟನ್ನು ನೋಡಲೇಬೇಕು.  ಕಾಶ್ಮೀರ  ವಿಚಾರದಲ್ಲಿ ಆಜಾದ್ ಇನ್ನು ಮುಂದೆ ಎಚ್ಚರಿಕೆಯಿಂದ ಮಾತನಾಡಬೇಕು ಎಂಬುದನ್ನು ನಟಿ ಸೂಚ್ಯವಾಗಿ ಹೇಳಿದ್ದಾರೆ.

ಕಾಶ್ಮೀರದೊಳಗೆ ಕಡ್ಡಿ ಆಡಿಸಿದ ಆಫ್ರಿದಿಗೆ ಗಂಭೀರ್ ತಿರುಗೇಟು!

‘ ಕಾಂಗ್ರೆಸ್ ನೊಂದಿಗೆ ಡೀಲ್ ಮಾಡಿಕೊಂಡು ಕಳೆದ 70 ವರ್ಷದಿಂದ  ಕುತಂತ್ರ ಸಾಕು. ಪಾಕಿಸ್ತಾನದ ಉಗ್ರಗಾಮಿಗಳಿಗಿಂತ ಈ ಗುಲಾಂ ನಬಿ ಆಜಾದ್ ಅವರ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಸಂಸತ್ ಅಧಿವೇಶನ ಮುಗಿದ ಮೇಲೆ ಮತ್ತೆ  ಇದೇ ವಿಚಾರವನ್ನು ಕೆದಕಿದರೆ ಅವರ ಮನೆಯ ಮೇಲೆ ಕಲ್ಲು ಬೀಳುತ್ತದೆ ಎಂದು ಹೇಳಿ’

ರಾಜ್ಯಸಭೆಯಲ್ಲಿ ಮಸೂದೆ ಮಂಡನೆ ಮಾಡಿದಾಗ ಕಾಂಗ್ರೆಸ್ ಸೇರಿದಂತೆ ಕೆಲ ವಿಪಕ್ಷಗಳು ಆಕ್ಷೇಪ ಎತ್ತಿದ್ದವು. ಗುಲಾಂ ನಬಿ ಆಜಾದ್ ಇದು ಪ್ರಜಾಪ್ರಭುತ್ವ ವಿರೋಧಿ ಎಂದು ಮೇಜು ಕುಟ್ಟಿದ್ದರು.