ನವದೆಹಲಿ: ಭಾರತೀಯ ಮತ್ತು ವಿದೇಶಿಗರ ನೆಚ್ಚಿನ ತಾಣವಾಗಿರುವ ಆಗ್ರಾದ ಐತಿಹಾಸಿಕ ತಾಜ್‌ ಮಹಲ್‌ನಲ್ಲಿ ಪ್ರವಾಸಿಗರು 3 ಗಂಟೆಗಳಿಗಿಂತ ಹೆಚ್ಚು ಹೊತ್ತು ಕಳೆಯುವಂತಿಲ್ಲ ಎಂಬ ನಿಯಮ ಜಾರಿಗೆ ತರಲಾಗಿದೆ. 3 ಗಂಟೆಗಿಂತ ಹೆಚ್ಚು ಸಮಯಾವಕಾಶ ಕಳೆದ ಪ್ರವಾಸಿಗರು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರದ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚುವರಿ ಸಮಯ ಕಳೆದವರು, ನಿರ್ಗಮನದ ವೇಳೆ ಹೆಚ್ಚುವರಿ ಹಣ ಪಾವತಿಸಬೇಕು. ಕೆಲ ಪ್ರವಾಸಿಗರು ಮುಂಜಾನೆಯಿಂದ ಸಂಜೆಯವರೆಗೂ ತಾಜ್‌ ಆವರಣದಲ್ಲೇ ಕಾಲ ಕಳೆಯುತ್ತಿದ್ದರು. ಇದಕ್ಕೆ ಬ್ರೇಕ್‌ ಹಾಕಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಈ ನಿರ್ಧಾರ, ರೋಮಾಂಚನ ಕ್ಷಣಗಳನ್ನು ಕಳೆಯುವ ಉದ್ದೇಶದೊಂದಿಗೆ ಸೂರ್ಯೋದಯಕ್ಕೂ 30 ನಿಮಿಷ ಮುಂಚಿತವಾಗಿ ಹಾಗೂ ಸಂಜೆ ಸೂರ್ಯಾಸ್ತವಾಗುವವರೆಗೂ ತಾಜ್‌ನಲ್ಲೇ ಇರಬೇಕೆಂದುಕೊಳ್ಳುತ್ತಿದ್ದ ಪ್ರವಾಸಿಗರಿಗೆ ಈ ಬೆಳವಣಿಗೆ ಬೇಸರ ತರಿಸಿದೆ.

ತಾಜ್ ಮಹಲ್ ಪ್ರವೇಶಕ್ಕೆ ಹೊಸ ನಿಯಮ, ಭೇಟಿ ನೀಡೋ ಮುನ್ನ ಇಲ್ಲಿ ಗಮನಿಸಿ

ತಾಜ್‌ಮಹಲ್‌ ಪ್ರವೇಶಕ್ಕೆ ಭಾರತೀಯ ಪ್ರವಾಸಿಗರಿಗೆ 250 ರು., ವಿದೇಶಿ ಪ್ರವಾಸಿಗರಿಗೆ 1300 ರು. ಹಾಗೂ ಸಾರ್ಕ್ ರಾಷ್ಟ್ರಗಳ ಪ್ರವಾಸಿಗರಿಗೆ 740 ರು. ಶುಲ್ಕವಿದೆ.