ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಕೇಂದ್ರ ಸರ್ಕಾರದ ನೋಟ್ ಬ್ಯಾನ್ ‌ ಬಗ್ಗೆ ಅಸಮಾಧನ ವ್ಯಕ್ತಡಿಸಿದ್ದಾರೆ. ಟ್ವಿಟ್ಟರ್‌ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಪವನ್‌, ದೊಡ್ಡ ನೋಟಿನ ರದ್ದತಿಯು ಬಡವರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬರೆದುಕೊಂಡಿದ್ದಾರೆ.
ನವದೆಹಲಿ(ನ.22): ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಬಗ್ಗೆ ಅಸಮಾಧನ ವ್ಯಕ್ತಡಿಸಿದ್ದಾರೆ. ಟ್ವಿಟ್ಟರ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಪವನ್, ದೊಡ್ಡ ನೋಟಿನ ರದ್ದತಿಯು ಬಡವರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಸಿನಿಮಾ ರಂಗದಿಂದ ನಿವೃತ್ತಿ ಪಡೆದು ರಾಜಕೀಯದಲ್ಲಿ ತೊಡಗಲು ನಿರ್ಧರಿಸಿರುವ ಬೆನ್ನಲ್ಲೇ, ಟಾಲಿವುಡ್ ಸ್ಟಾರ್ ಪವನ್ ಕಲ್ಯಾಣ್ ಕೇಂದ್ರ ಸರ್ಕಾರದ ಕ್ರಾಂತಿಕಾರಿ ನಿರ್ಧಾರದ ವಿರುದ್ಧ ಗುಡುಗಿರುವುದು ಸಾಕಷ್ಟು ಕುತೂಹಲ ಮಾಡಿಸಿದೆ.
ಜನಸೇನಾ ಪಕ್ಷ ಕಟ್ಟಿರುವ ಪವನ್, 2019ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
