ತೆಲುಗು ನಟ ಪವನ್ ಕುಮಾರ್ ಮುಂಬರುವ 2019ರ ವಿಧಾನಸಭಾ ಚುನಾವಣೆಯಲ್ಲಿ ಆಂಧ್ರದ ಅನಂತಪುರ ಜಿಲ್ಲೆಯಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಸಿನಿಮಾ ರಂಗವನ್ನು ಬಿಟ್ಟು ಸಂಪೂರ್ಣವಾಗಿ ರಾಜಕೀಯ ಸೇರುವುದಾಗಿ ಹೇಳಿದ್ದಾರೆ.
ಬೆಂಗಳೂರು (ಮೇ.15): ತೆಲುಗು ನಟ ಪವನ್ ಕುಮಾರ್ ಮುಂಬರುವ 2019ರ ವಿಧಾನಸಭಾ ಚುನಾವಣೆಯಲ್ಲಿ ಆಂಧ್ರದ ಅನಂತಪುರ ಜಿಲ್ಲೆಯಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಸಿನಿಮಾ ರಂಗವನ್ನು ಬಿಟ್ಟು ಸಂಪೂರ್ಣವಾಗಿ ರಾಜಕೀಯ ಸೇರುವುದಾಗಿ ಹೇಳಿದ್ದಾರೆ.
ಟಿಡಿಪಿ ನಾಯಕ ನಾರಾ ಲೋಕೇಶ್ ಪವನ್ ಕುಮಾರ್’ಗೆ ‘ಪಾರ್ಟ್’ಟೈಮ್ ರಾಜಕಾರಣಿ’ ಎಂದು ಟೀಕಿಸಿದ ಹಿನ್ನೆಲೆಯಲ್ಲಿ ಪವನ್ ಕುಮಾರ್ ಪ್ರತಿಕ್ರಿಯಿಸುತ್ತಾ, ನಾನು ಚಿತ್ರರಂಗ ಬಿಟ್ಟು ಸಂಪೂರ್ಣ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಸಿದ್ಧ ಎಂದಿದ್ದಾರೆ.
ನನಗೆ ಪಾರ್ಟ್ ಟೈಮ್, ಫುಲ್ ಟೈಮ್ ರಾಜಕಾರಣ ಅಂದ್ರೇನು ಅಂತ ಗೊತ್ತಿಲ್ಲ. ಕೆಲವು ರಾಜಕಾರಣಿಗಳು ಚೆನ್ನಾಗಿ ಹಣ ಮಾಡಿಕೊಂಡು ಮನೆಯಲ್ಲಿ ಕುಳಿತಿರುತ್ತಾರೆ. ಆದರೂ ಅವರನ್ನು ಫುಲ್ ಟೈಮ್ ರಾಜಕಾರಣಿ ಎನ್ನುತ್ತಾರೆ ಎಂದು ಪವನ್ ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ. ಮುಂಬರುವ ಚಿತ್ರಗಳ ಆಫರ್ ಗಳನ್ನು ಒಪ್ಪಿಕೊಳ್ಳುವುದಿಲ್ಲವೆಂದು ಪವನ್ ಹೇಳಿದ್ದಾರೆ.
ಸದ್ಯಕ್ಕೆ ಪವನ್ ಕುಮಾರ್ ಚಿತ್ರವೊಂದರಲ್ಲಿ ಬ್ಯುಸಿಯಾಗಿದ್ದಾರೆ. ಇದರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ.
