ರೈಲಿನ ಒಂದೆರಡು ಬೋಗಿಗಳು ಹಳಿ ತಪ್ಪುತ್ತವೆ, ಆದರೆ ಒಮ್ಮೆಗೆ 14 ಬೋಗಿಗಳು ಹಳಿತಪ್ಪಿರುವುದು ಸಂಶಯಗಳನ್ನು ಹುಟ್ಟುಹಾಕಿದೆ. ರೈಲ್ವೇಹಳಿಯಲ್ಲಿ ಸಮಸ್ಯೆಯಿರುವುದಿಂದ ಈ ರೀತಿ ಆಗಿದೆಯೋ ಅಥವಾ ರೈಲ್ವೇ ಇಲಾಖೆಯ ಹೆಸರನ್ನು ಕೆಡಿಸಲು ಈ ರೀತಿ ಮಾಡಲಾಗಿದೆಯೋ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಜೋಷಿ ಆಗ್ರಹಿಸಿದ್ದಾರೆ
ನವದೆಹಲಿ (ನ.20): ನೂರಕ್ಕಿಂತಲೂ ಹೆಚ್ಚು ಜೀವಗಳನ್ನು ಬಲಿತೆಗೆದು ಕೊಂಡಿರುವ ಪಾಟ್ನಾ-ಇಂದೋರ್ ರೈಲು ದುರಂತದ ಹಿಂದೆ ಕೇಂದ್ರ ಸರ್ಕಾರದ ಹೆಸರು ಕೆಡಿಸುವ ಷಡ್ಯಂತ್ರವಿರಬಹುದೆಂದು ಆರೋಪಿಸಿರುವ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ ಜೋಷಿ, ಘಟನೆ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.
ರೈಲಿನ ಒಂದೆರಡು ಬೋಗಿಗಳು ಹಳಿ ತಪ್ಪುತ್ತವೆ, ಆದರೆ ಒಮ್ಮೆಗೆ 14 ಬೋಗಿಗಳು ಹಳಿತಪ್ಪಿರುವುದು ಸಂಶಯಗಳನ್ನು ಹುಟ್ಟುಹಾಕಿದೆ. ರೈಲ್ವೇಹಳಿಯಲ್ಲಿ ಸಮಸ್ಯೆಯಿರುವುದಿಂದ ಈ ರೀತಿ ಆಗಿದೆಯೋ ಅಥವಾ ರೈಲ್ವೇ ಇಲಾಖೆಯ ಹೆಸರನ್ನು ಕೆಡಿಸಲು ಈ ರೀತಿ ಮಾಡಲಾಗಿದೆಯೋ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಜೋಷಿ ಏಎನ್’ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಘಟನೆಗೆ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿರುವ ಜೋಷಿ, ರೈಲ್ವೇ ಹಳಿಗಳಲ್ಲಿ ತಾಂತ್ರಿಕ ಸಮಸ್ಯೆಗಳಿದ್ದರೆ ಸರ್ಕಾರ ಅದನ್ನು ತಕ್ಷಣ ಸರಿಪಡಿಸಬೇಕೆಂದು ಅವರು ಹೇಳಿದ್ದಾರೆ.
