ಮೈಸೂರು (ಸೆ.22): ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಮಹಾಮಾರಿ ಡೆಂಘೀ ನರ್ತನ ಜೋರಾಗಿದೆ. ಪರಿಣಾಮ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಒಂದೇ ಬೆಡ್​ನಲ್ಲಿ ಮೂರು ಮೂರು-ಮಕ್ಕಳು ಚಿಕಿತ್ಸೆ ಪಡೆಯುವ ದುಸ್ಥಿತಿ ಎದುರಾಗಿದೆ.

ಕಳೆದ ಒಂದುವಾರದಿಂದ ನಗರ ಹಾಗು ಜಿಲ್ಲೆಯಾದ್ಯಂತ ಡೆಂಘೀ ಪೀಡಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೈಸೂರಿನ ಕೆ.ಆರ್​.ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.

ಪರಿಣಾಮ, ಬೆಡ್​ ವ್ಯವಸ್ಥೆಯಿಲ್ಲದೇ ರೋಗಿಗಳು ಒಂದೇ ಬೆಡ್​ನಲ್ಲಿ ಮೂರು ಮೂರು ಮಂದಿ ಚಿಕಿತ್ಸೆ ಪಡೆಯಬೇಕಾದ ದುಸ್ಥಿತಿ ಎದುರಾಗಿದೆ. ಇಷ್ಟಾದರೂ, ಇವರ ಗೋಳನ್ನ ಕೇಳುವವರು ಯಾರೂ ಇಲ್ಲದಾಗಿದ್ದಾರೆ.