ಗಂಟಲಲ್ಲಿ ಸಿಲಕಿದ್ದ ಹಲ್ಲಿನ ಸೆಟ್ಟನ್ನು ವೈದ್ಯರು ಹೊರತೆಗೆದಿದ್ದಾರೆ. ಇನ್ನು ಜಿಎಂ ಆಸ್ಪತ್ರೆ ವೈದ್ಯರ ಮಾಡಿರುವ ಯಡವಟ್ಟಿನಿಂದ ಜಯಲಕ್ಷ್ಮಿ ಹಾಸಿಗೆ ಹಿಡಿದಿದ್ದಾರೆ
ವೈದ್ಯೋ ನಾರಾಯಣ ಹರಿ ಅಂತ್ತಾರೆ. ವೈದ್ಯರನ್ನ ನಾವು ದೇವರ ಸಮಾನವಾಗಿ ಕಾಣುತ್ತೇವೆ. ಆದ್ರೆ ಇಲ್ಲೊಂದು ಆಸ್ಪತ್ರೆ ಇದೆ ನೋಡಿ. ರೋಗಿಗಳ ಜೀವ ರಕ್ಷಣೆ ಮಾಡಬೇಕಿದ್ದ ಈ ಆಸ್ಪತ್ರೆ ರೋಗಿಗಳ ಪಾಲಿಗೆ ಯಮನಂತಾಗಿದೆ.
ಬೆಂಗಳೂರಿನ ವಿಜಯನಗರದ ನಿವಾಸಿ ಜಯಲಕ್ಷ್ಮಿ ಎಂಬುವರು ಹೊಟ್ಟೆನೋವು ಅಂತಾ ಹೇಳಿ ನಾಗರಬಾವಿಯಲ್ಲಿರುವ ಸಂಸದ ಜಿಎಂ ಸಿದ್ದೇಶ್ವರ ಅವರ ಜಿಎಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿಡ್ನಿ ಸ್ಟೋನ್ ಆಗಿದೆ ಅಂತಾ ವೈದ್ಯರು ಆಪರೇಷನ್ ಮಾಡಲು ಮುಂದಾಗಿ ವೈದ್ಯರು ಅನಸ್ತೇಶಿಯಾ ನೀಡಿದ್ದಾರೆ. ಈ ವೇಳೆ ಜಯಲಕ್ಷ್ಮಿಯ ಹಲ್ಲಿನ ಸೆಟ್ ಗಂಟಲಿಗೆ ತುರುಕಿದ್ದಾರೆ. ಹಲವು ಬಾರಿ ಹಲ್ಲಿನ ಸೆಟ್ ಬಗ್ಗೆ ವೈದ್ಯರಿಗೆ ಜಯಲಕ್ಷ್ಮಿ ಹೇಳಿದ್ರೂ ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿ ಗಂಟಲು ನೋವು ಜಾಸ್ತಿಯಾಗಿ ಹಾಸಿಗೆ ಹಿಡಿದಿದ್ದಾರೆ.
ಜಿಎಂ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದ ಬಳಿಕ ವೃದ್ದ ಜಯಲಕ್ಷ್ಮಿ ಗಂಟಲು ನೋವು ತಾಳದೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಗಂಟಲಲ್ಲಿ ಸಿಲಕಿದ್ದ ಹಲ್ಲಿನ ಸೆಟ್ಟನ್ನು ವೈದ್ಯರು ಹೊರತೆಗೆದಿದ್ದಾರೆ. ಇನ್ನು ಜಿಎಂ ಆಸ್ಪತ್ರೆ ವೈದ್ಯರ ಮಾಡಿರುವ ಯಡವಟ್ಟಿನಿಂದ ಜಯಲಕ್ಷ್ಮಿ ಹಾಸಿಗೆ ಹಿಡಿದಿದ್ದಾರೆ. ಘಟನೆ ನಡೆದು ಏಳು ತಿಂಗಳಾದರೂ ಜಯಲಕ್ಷ್ಮಿ ಚೇತರಿಸಿಕೊಂಡಿಲ್ಲ. ಕೈ ಕಾಲು ಊದಿಕೊಂಡಿದ್ದು ಎದ್ದು ನಡೆಯಕಾಗದೆ ಪರದಾಡ್ತಿದ್ದಾರೆ. ಇನ್ನು ಈ ಘಟನೆಯ ಬಗ್ಗೆ ಜಿಎಂ ಆಸ್ಪತ್ರೆಯ ವೈದ್ಯರನ್ನ ಕೇಳಿದರೆ ಇವೆಲ್ಲ ಸುಳ್ಳು, ನಮ್ಮಿಂದ ಯಾವುದೇ ತಪ್ಪಾಗಿಲ್ಲ ಅಂತಿದ್ದಾರೆ. ಒಟ್ಟಾರೆ ವೈದ್ಯರು ಮಾಡುವ ಎಡವಟ್ಟಿನಿಂದ ಗಟ್ಟಿಯಾಗಿ ಓಡಾಡಿಕೊಂಡು ಇರಬೇಕಿದ್ದ ಹಿರಿಯ ಜೀವವೊಂದು ಹಾಸಿಗೆ ಹಿಡದಿದೆ. ಇನ್ನಾದರೂ ಆಸ್ಪತ್ರೆಯ ಆಡಳಿತ ಮಂಡಳಿ ಜಯಲಕ್ಷ್ಮಿಯ ಪರಿಸ್ಥಿತಿಯ ಬಗ್ಗೆ ಗಮನ ಹರಿಸಿ ಸೂಕ್ತ ಪರಿಹಾರ ನೀಡಬೇಕಿದೆ.
