ಅಹಮದಾಬಾದ್ : ಪಾಟೀದಾರ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. 

ಕಿಂಜಲ್ ಪರೀಕ್ ಜೊತೆ ಹಾರ್ದಿಕ್ ಪಟೇಲ್ ದಿಗ್ ಸರ್ ಹಳ್ಳಿಯಲ್ಲಿ ಹಸೆಮಣೆ ಏರಿದ್ದಾರೆ. 

 

ಕಳೆದ ಅನೇಕ ದಿನಗಳಿಂದ ಹಾರ್ದಿಕ್ ಪಟೇಲ್, ಕಿಂಜಲ್ ಅವರೊಂದಿಗೆ ಎಂಗೇಜ್ ಆಗಿದ್ದು, ಕಿಂಜಲ್ ಮೂಲತಃ ಸೂರತ್ ಮೂಲದವರಾಗಿದ್ದಾರೆ. 

ಕೆಲ ದಿನಗಳ ಹಿಂದೆ ಹಾರ್ದಿಕ್ ಪಟೇಲ್ ಮೀಸಲಾತಿಗಾಗಿ ಉಪವಾಸ ಕೈಗೊಂಡಿದ್ದರು. ಅನೇಕ ಕಾಲಗಳಿಂದಲೂ ಕೂಡ ಪಾಟೀದಾರ್ ಮೀಸಲಾತಿಗಾಗಿ ಹೋರಾಟ ನಡೆಸಿಕೊಂಡು ಬಂದಿದ್ದರು. ಇದೀಗ ಕಿಂಜಲ್ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದಾರೆ.