ಪಾತಾಳದಲ್ಲಿನ ನೀರನ್ನು ಹೊರತೆಗೆಯುವ ‘ಪಾತಾಳ ಗಂಗೆ' ಯೋಜನೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಎಂದು ಕಾನೂನು, ಸಂಸದೀಯ ಮತ್ತು ಸಣ್ಣ ನಿರಾವರಿ ಸಚಿವ ಟಿ.ಬಿ. ಜಯಚಂದ್ರ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರು(ಮೇ.08): ಬರಗಾಲ ನಿವಾರಿಸಲು ಮೋಡ ಬಿತ್ತನೆ ಮಾಡಬೇಕು ಎಂಬ ಬೇಡಿಕೆಯಿದೆ. ಈ ಹಿಂದೆ ಬೆಂಗಳೂರಿನಲ್ಲಿ ಮೋಡ ಬಿತ್ತನೆ ಮಾಡಿದರೆ ಚಿಕ್ಕಬಳ್ಳಾಪುರ ಮತ್ತು ಆಂಧ್ರದ ಹಿಂದೂಪುರದಲ್ಲಿ ಮಳೆ ಆಗಿತ್ತು. ಆದ್ದರಿಂದ ಮೋಡ ಬಿತ್ತನೆ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಿದಲ್ಲಿ ಎಲ್ಲಾ ರಾಜ್ಯಗಳಿಗೂ ಅನುಕೂಲವಾಗಲಿದೆ ಎಂದು ಸಚಿವ ಜಯಚಂದ್ರ ಹೇಳಿದರು. ಕನ್ನಡಪ್ರಭ ವಾರ್ತೆ ಬೆಂಗಳೂರು
ಪಾತಾಳದಲ್ಲಿನ ನೀರನ್ನು ಹೊರತೆಗೆಯುವ ‘ಪಾತಾಳ ಗಂಗೆ' ಯೋಜನೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಎಂದು ಕಾನೂನು, ಸಂಸದೀಯ ಮತ್ತು ಸಣ್ಣ ನಿರಾವರಿ ಸಚಿವ ಟಿ.ಬಿ. ಜಯಚಂದ್ರ ಅಭಿಪ್ರಾಯ ಪಟ್ಟಿದ್ದಾರೆ.
ಭಾನುವಾರ ಸುವರ್ಣ ನ್ಯೂಸ್ ಆಯೋಜಿಸಿದ್ದ ‘ಹಲೋ ಮಿನಿಸ್ಟರ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಯೋಗಿಕವಾಗಿ ‘ಪಾತಾಳಗಂಗೆ' ಯೋಜನೆ ಮಾಡಿದಲ್ಲಿ ತಪ್ಪಾಗುವುದಿಲ್ಲ. ಆದರೆ, ರಾಜ್ಯದಲ್ಲಿ 1800 ಅಡಿಗೂ ಹೆಚ್ಚು ಕೊರೆದರೂ ನೀರು ಸಿಗುತ್ತಿಲ್ಲ. ಹೆಚ್ಚು ಆಳ ಕೊರೆದಂತೆ ಕುಡಿಯಲು ಯೋಗ್ಯವಲ್ಲದ ನೀರು ಲಭ್ಯವಾಗುತ್ತಿದೆ. ಇಂತಹ ನೀರನ್ನು ಹೊರತೆಗೆದು ಜನರಿಗೆ ನೀಡುವ ಪಾತಾಳಗಂಗೆ ಯೋಜನೆಯಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಭೂಮಿಯ ಒಳಭಾಗಗಳಲ್ಲಿ ನೀರಿನ ಸೆಲೆಗಳಿರುತ್ತವೆ. ಅವುಗಳಲ್ಲಿ ನೀರು ಕೆಲ ಕಾಲಕ್ಕೆ ಮಾತ್ರ ಲಭ್ಯವಾಗುತ್ತವೆ. ದೀರ್ಘಾವಧಿ ಬಳಕೆ ಮಾಡಬಹುದು ಎಂಬುದು ತಪ್ಪು ಕಲ್ಪನೆ ಎಂದರು. ಆಕಾಶದಲ್ಲಿ ಏನಿದೆ ಎಂಬುದನ್ನು ನಾವು ಕಣ್ಣಾರೆ ನೋಡಿದ್ದೇವೆ. ಆದರೆ, ಪಾತಾಳದಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ವಿಜ್ಞಾನಿಗಳು ಅಲ್ಲಿಗೆ ಕರೆದುಕೊಂದು ಹೋಗಿ ತೋರಿಸಿದಲ್ಲಿ ನಾನು ನಂಬುತ್ತೇನೆ. ಅದನ್ನು ಬಿಟ್ಟು ಪಾತಾಳದಲ್ಲಿರುವ ಗಂಗೆ ಹೊರತೆಗೆಯುತ್ತೇವೆ ಎಂದು ಹೇಳಿದರೆ ಅದರಿಂದ ಶಾಶ್ವತ ಪರಿಹಾರ ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಲಿದೆ ಎಂದರು.