ವಿಮಾನದಲ್ಲಿ ಪ್ರಯಾಣಿಸುವವರು ಸಭ್ಯರಾಗಿರುತ್ತಾರೆ ಎಂಬುದು ನಮ್ಮೆಲ್ಲರ ನಂಬಿಕೆ. ಆದರೆ, ಇಲ್ಲೊಬ್ಬ ಪುಣ್ಯಾತ್ಮ ವಿಮಾನದಲ್ಲೇ ನಗ್ನವಾಗಿ ಓಡಾಡಿ ಎಲ್ಲರೂ ಮುಖ ಮುಚ್ಚಿಕೊಳ್ಳುವಂತೆ ಮಾಡಿದ್ದಾನೆ. 

ಇಂಥದ್ದೊಂದು ಘಟನೆ ನಡೆದಿದ್ದು ದುಬೈನಿಂದ ಲಖನೌಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ. ವಿಮಾನ ಅರ್ಧ ಹಾದಿ ಕ್ರಮಿಸಿದ ವೇಳೆ ವಿವಸ್ತ್ರನಾದ ಆತ ಪ್ಯಾಸೇಜ್ ನಲ್ಲಿ ನಡೆದಾಡಲು ಆರಂಭಿಸಿದ್ದಾನೆ. ಕೊನೆಗೆ ವಿಮಾನದ ಇಬ್ಬರು ಸಿಬ್ಬಂದಿ ಆತನಿಗೆ ಚಾದರ ಹೊದೆಸಿ ಸೀಟಿನ ಮೇಲೆ ಕೂರಿಸಿದ್ದಾರೆ. ಹೀಗಾಗಿ ವಿಮಾನ ಪ್ರಯಾಣಕ್ಕೆ ಯಾವುದೇ ತೊಂದರೆ ಆಗಿಲ್ಲ. 

ವಿಮಾನ ಲಖನೌದಲ್ಲಿ ಇಳಿದ ಬಳಿಕ ನಗ್ನ ಪ್ರಯಾಣಿಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಅಂದಹಾಗೆ ಆತ ಇದ್ದಕ್ಕಿಂದ್ದಂತೆ ಬಟ್ಟೆ ಬಿಚ್ಚಿ ಓಡಾಡಲು ಏನು ಕಾರಣ ಎಂಬುದು ತಿಳಿದುಬಂದಿಲ್ಲ.