ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅನಾರೋಗ್ಯ ಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳನ್ನು ಪರಿಶೀಲಿಸಲು ಭಾನುವಾರ ಬಿಜೆಪಿಯ ಮೂವರು ಸದಸ್ಯರ ಸಮಿತಿ ಪಣಜಿಗೆ ಆಗಮಿಸಿದೆ. 

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿಗಳಾದ ಬಿ.ಎಲ್. ಸಂತೋಷ್, ರಾಮ್‌ಲಾಲ್ ಮತ್ತು ಗೋವಾ ಉಸ್ತುವಾರಿ ವಿಜಯ್ ಪುರಾಣಿಕ್ ಸಮಿತಿಯಲ್ಲಿದ್ದಾರೆ. 

ಆದರೆ, ತಕ್ಷಣಕ್ಕೆ ಗೋವಾದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಪರ್ರಿಕರ್ ಹೊಂದಿರುವ ಹೆಚ್ಚುವರಿ ಖಾತೆಗಳನ್ನು ಇತರರಿಗೆ ಹಂಚಿಕೆ ಮಾಡಲಾಗು ವುದು ಎಂದು ಮೂಲಗಳು ತಿಳಿಸಿವೆ. ಪರ್ರಿಕರ್ ಅನುಪಸ್ಥಿತಿಯಲ್ಲಿ ಬೇರೊಬ್ಬರಿಗೆ ಅಧಿಕಾರ ಹಸ್ತಾಂತರಿಸಬೇಕು ಎಂದು ಮಿತ್ರಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವೇ ಶನಿವಾರ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಮುಜುಗರ ಕ್ಕೊಳಗಾಗಿತ್ತು. ಈ ನಡುವೆ ಪರಿಸ್ಥಿತಿ ಕಾದು ನೋಡಲು ಕಾಂಗ್ರೆಸ್ ನಿರ್ಧರಿಸಿದೆ. 

ಇತ್ತೀಚೆಗಷ್ಟೇ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಸ್ವದೇಶಕ್ಕೆ  ಆಗಮಿಸಿದ್ದ ಪರ್ರಿಕರ್ ಆರೋಗ್ಯ ವಿಷಮಗೊಂಡ ಹಿನ್ನೆಲೆಯಲ್ಲಿ, ಅವರನ್ನು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿದೆ.